ಔದಂಬರ ವೃಕ್ಷ
ಹಸಿರು ಬಣ್ಣದ, ಒಂದಡಿಯಷ್ಟು ಉದ್ದದ, ದೊಡ್ದ ಎಲೆಗಳನ್ನು ಹೊಂದಿರುವ ಔಡಬಲ ವೃಕ್ಷವು ೧೦ ರಿಂದ ೩೦ ಅಡಿ ಎತ್ತರಕ್ಕೆ ಬೆಳೆಯಬಲ್ಲುದು. ಫಿಕಸ್ ರೇಸಿಮೊಸ(ಫಿಕಸ ಗ್ಲೊಮೆರಾಟ) ಎಂಬ ವೈಜ್ಞಾನಿಕ ಹೆಸರುಳ್ಳ ಈ ಗಿಡವು ಮೊರಾಸೇ ಸಸ್ಯವರ್ಗಕ್ಕೆ ಸೇರಿದೆ. ಔದುಂಬರ ಸಂಸ್ಕ್ರತ ಪದವಗಿದ್ದು ಹಿಂದಿಯಲ್ಲಿ ಅಂಜೂರ್ ಎಂದೂ ಕನ್ನಡದಲ್ಲಿ ಅಂಜೂರ್/ ಅತ್ತಿ ಎಂದೂ ಕರೆಯುತ್ತಾರೆ. ಫಿಗ್ ಟ್ರೀ ಎನ್ನುವುದು ಆಂಗ್ಲ ಹೆಸರು. ಆಸ್ಟ್ರೇಲಿಯ, ಮಲೇಷ್ಯಾ, ಆಗ್ನೇಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುವ ಈ ಗಿಡವು ಒಣ-ಉಷ್ಣ ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದ ಆರಂಭ ಗಿಡ ನೆಡಲು ಸೂಕ್ತ ಕಾಲ. ಸಸಿ ಬಲಿಯುವ ತನಕ ಹೆಚ್ಚಿನ ನೀರು ಅಗತ್ಯ. ಒಂದು ವರ್ಷದಲ್ಲಿ ಕಾಯಿ ಬಿಡಲು ಶುರು ಮಾಡುವ ಈ ಮರಗಳು ೩೫ ವರ್ಷಗಳ ಕಾಲಾಬಾಳಿಕೆ ಹೊಂದಿರುತ್ತವೆ. ಹಣ್ಣುಗಳಲ್ಲಿ ನಾಲ್ಕು ವಿಧಗಳಿದ್ದು, ಕೊಯ್ಲಿನ್ ಸೀಸನ್ ಆಯಾ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಹೆಚ್ಚು ಮಾಗಿದ ಹಣ್ಣುಗಳು ಬಿರಿಯುವುದು ಉಂಟು. ಹೂವುಗಳು ಅತಿ ಚಿಕ್ಕದಾಗಿದ್ದು ಕಾಣಸಿಗುವುದು ಅಪರೂಪ. ಕಾಂಡಕ್ಕೆ ಅಂಟಿಕೊಂಡು ಗೊಂಚಲು ಕಾಯಿಗಳನ್ನು ಬಿಡುವುದು ಇದರ ವೈಶಿಷ್ಟ್ಯ. ಜೆಲ್ಲಿಯಂತಹ ಮಾಂಸಲ ತಿರುಳುಳ್ಳ ಸಿಹಿ ಸಹಿತ ಸ್ವಾದಿಷ್ಟ ಅಂಜೂರ ಹಣ್ಣುಗಳು ಕೇಂದ್ರ ಭಾಗದಲ್ಲಿ ಬೀಜ ಪುಂಜಗಳಿದ್ದು, ಅವುಗಳನ್ನು ಸಾಮಾನ್ಯವಾಗಿ ಕಣಜೀರಿಗೆ ಹುಳಗಳ ಭಾದಿಸುತ್ತವೆ. ಆದ್ದರಿಂದ ಹಣ್ಣುಗಳನ್ನು ೨-೩ ಹೋಳುಗಳಾಗಿಸಿ ಕಡು ಬಿಸಲಲ್ಲಿ ಸುಮಾರು ಒಂದು ಗಂಟೆ ಒಣಗಿಸಿ ಬಳಿಕ ತಿನ್ನುವುದು ಒಳ್ಳಯದು. ಪ್ರತಿಶತ ೯೦ ರಷ್ಟು ಔದುಂಬರದ ಹಣ್ಣುಗಳನ್ನು ಒಣಗಿಸಿಯೇ ಡ್ರ್ಯೆಫ್ರುಟ್ ಅಗಿ ಉಪಯೋಗಿಸುತ್ತಾರೆ. ಇದು ದತ್ತಾತ್ರೇಯರ ಪ್ರಿಯವಾದ ವೃಕ್ಷವಾಗಿದೆ .
ಗುಣ ವಿಶೇಷಗಳು :-
ಉಷ್ಣ ಗುಣ ಹೊಂದಿರುವ ಅತ್ತಿ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೇನುತುಪ್ಪದೊಡನೆ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ.ಹಣ್ಣನ್ನು ತಿನ್ನುವುದರಿಂದ ಕಫದ ಬಾಧೆ, ರಕ್ತನಾಳದ ದೋಷ ಉಪಶಮನವಾಗುತ್ತದೆ.ಅತ್ತಿಮರದ ಹಾಲಿಗೆ ಭೇದಿ(ಅತಿಸಾರ) ನಿಲ್ಲಿಸುವ ಶಕ್ತಿಯಿದೆ.ಮರದ ಚಕ್ಕೆಯ ಕಷಾಯ ಗರ್ಭ ರಕ್ಷಣೆಯ ಗುಣವುಳ್ಳದ್ದಾಗಿದ್ದು, ಮಧುಮೇಹ ರೋಗಿಗಳಿಗೂ ಸೂಕ್ತವಾದದ್ದು
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:
Post a Comment