ಗರಿಕೆ ಹುಲ್ಲು
ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹಾಗೆಂದು ಹಸಿ ಹುಲ್ಲನ್ನೇ ತಿನ್ನಬೇಕಾಗಿಲ್ಲ. ಏನು ಮಾಡಬಹುದು ನೋಡೋಣ.
* ಒಂದು ಹಿಡಿ ಗರಿಕೆಯನ್ನು ಎರಡು ಲೋಟ ನೀರಿನಲ್ಲಿ ಹಾಕಿ, ಆ ನೀರು ಸ್ವಲ್ಪ ಬತ್ತುವವರೆಗೆ ಕುದಿಸಿ ನಂತರ ಆ ನೀರನ್ನು ಕುಡಿದರೆ ಹಳೆಯ ಔಷಧಿಗಳ ಅವಶೇಷಗಳೆಲ್ಲ ಶರೀರದಿಂದ ಮಾಯವಾಗುತ್ತದೆ. ಒಂದು ತಿಂಗಳವರೆಗೆ ಈ ಕಷಾಯವನ್ನು ಕುಡಿಯಬೇಕಾಗುತ್ತದೆ.
*ಗರಿಕೆ ಮತ್ತು ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಆ ಕಷಾಯವನ್ನು ಕುಡಿದರೆ ವಾಯುವಿನಿಂದಾಗುವ ಬೆನ್ನು ಮತ್ತು ಸೊಂಟನೋವು ಕಡಿಮೆಯಾಗುತ್ತದೆ . ಈ ಕಷಾಯವನ್ನು ಸುಮಾರು ಒಂದು ತಿಂಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಗಳು , ಹಸಿವಿಲ್ಲದಿರುವುದು ಎಲ್ಲದಕ್ಕೂ ಒಳ್ಳೆಯದು. ಅನಗತ್ಯ ಕೊಲೆಸ್ಟರಾಲ್ ಕೂಡಾ ಕಡಿಮೆಯಾಗುತ್ತದೆ .
*ತೆಂಗಿನ ಎಣ್ಣೆಯಲ್ಲಿ ಗರಿಕೆಯನ್ನು ಕುದಿಸಿ ಆರಿಸಿ ತಲೆಗೆ ಹಚ್ಚಿದರೆ, ಶರೀರದ ಉಷ್ಣದಿಂದಾಗುವ ತಲೆಹೊಟ್ಟು ಕಡಿಮೆಯಾಗುವುದು.
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:
Post a Comment