Sunday, October 21, 2018

ಅಶ್ವಗಂಧ


ಅಶ್ವಗಂಧ
ನಮ್ಮ ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ಅಶ್ವಗಂಧಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆಯಿದೆ. ನೂರಕ್ಕೂ ಅಧಿಕ, ಅಸಂಖ್ಯಾತ ಪ್ರಯೋಜನಗಳನ್ನು ಅಶ್ವಗಂಧವು ನೀಡಬಲ್ಲದು. ಮಾನಸಿಕ ಒತ್ತಡದ ನಿಯಂತ್ರಣದಲ್ಲಿ ಅಶ್ವಗಂಧಕ್ಕೆ ಮೊದಲ ಸ್ಥಾನ. ಮನಸ್ಸನ್ನು ಹತೋಟಿ ಮಾಡುವ ಸಾಮರ್ಥ್ಯ ಅಶ್ವಗಂಧಕ್ಕಿದೆ. ಒಂದು ಸಮೀಕ್ಷೆಯ ಪ್ರಕಾರ 2020ನೇ ಇಸವಿಯ ಹೊತ್ತಿಗೆ ನಮ್ಮ ಭಾರತದಲ್ಲಿ ಅತೀ ಹೆಚ್ಚು ಬಳಕೆಯಾಗಬಲ್ಲ ಔಷಧಿಗಳೆಂದರೆ, ಅವು ಆಂಟಿ-ಆಂಕ್ಸೈಟಿ, ಆಂಟಿಡಿಪ್ರೆಸ್ಸಿವ್ ಔಷಧಿಗಳು. ಈಗಾಗಲೇ ಅಮೆರಿಕದಲ್ಲಿ ಮನಸ್ಸಿಗೆ ಸಂಬಂಧಪಟ್ಟ ಔಷಧಿಗಳು ಹೆಚ್ಚು ಬಳಕೆಯಾಗುತ್ತಿವೆ. ಆದರೆ ನಮ್ಮ ಭಾರತದಲ್ಲೂ ಆ ಪರಿಸ್ಥಿತಿ ಬರುವುದು ಅಷ್ಟು ದೂರದ ವಿಷಯವಲ್ಲ ಎಂಬುದು ವೈದ್ಯವಿಜ್ಞಾನಿಗಳ ಅಭಿಪ್ರಾಯ. ರಕ್ತದಲ್ಲಿರುವ ಕಾರ್ಟಿಸಾಲ್ ಮಾನಸಿಕ ಒತ್ತಡಕ್ಕೆ ಕಾರಣ. ಪ್ರತಿನಿತ್ಯ 600 ಎಂ.ಜಿ.ಯಷ್ಟು ಅಶ್ವಗಂಧಯುಕ್ತ ಔಷಧಿಗಳನ್ನು ಮೂರು ತಿಂಗಳುಗಳ ಕಾಲ ನೀಡಿ ಮಾಡಿದ ಸಂಶೋಧನೆಯಲ್ಲಿ ಶೇ. 69ರಷ್ಟು ಜನರಿಗೆ ಖಿನ್ನತೆಯ ಸಮಸ್ಯೆ ಕಡಿಮೆಯಾಯಿತು. ರಕ್ತದಲ್ಲಿನ ಕಾರ್ಟಿಸಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಅಶ್ವಗಂಧವು ಯಶಸ್ವಿಯಾಯಿತು. ಸ್ಟ್ರೆಸ್, ಆತಂಕ ಎಲ್ಲವೂ ಸಹ ಕಡಿಮೆಯಾಯಿತು.
ಬಂಜೆತನ ಸಮಸ್ಯೆಯ ನಿವಾರಣೆಯಲ್ಲಿ ಅಶ್ವಗಂಧವು ಅತ್ಯಂತ ಸಹಕಾರಿ. ಪುರುಷರಲ್ಲಿ ವೀರ್ಯಾಣುಗಳನ್ನು ವೃದ್ಧಿಸುತ್ತದೆ. ಇದು ಪುರುಷರಲ್ಲಿ ಟೆಸ್ಟೋಸ್ಟಿರಾನ್ ಎಂಬ ಹಾಮೋನ್​ನ ಮಟ್ಟವನ್ನು ಅಧಿಕಗೊಳಿಸುತ್ತದೆ. ಮಧುಮೇಹಿಗಳಿಗೆ ಅಶ್ವಗಂಧವು ಹೆಚ್ಚು ಸಹಕಾರಿ. ಪ್ರತಿನಿತ್ಯ ಅಶ್ವಗಂಧದ ಬಳಕೆಯಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಬಹುದು.
ಬಾದಾಮಿಯ ಹಾಲು ತೆಗೆದುಕೊಳ್ಳಬೇಕು (15-20 ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ರುಬ್ಬಿ, ಬಟ್ಟೆಯ ಸಹಾಯದಿಂದ ಸೋಸಿಕೊಳ್ಳಬೇಕು. ಇದರಿಂದ ಸಿಗುವ ದ್ರವ್ಯವೇ ಬಾದಾಮಿಯ ಹಾಲು). 1 ಲೋಟ ಹಾಲಿಗೆ ಚಿಟಿಕೆ ದಶಮೂಲ ಪುಡಿ, ಚಿಟಿಕೆ ತುಳಸಿ ಪುಡಿ ಹಾಗೂ ಒಂದು ಚಮಚ ಅಶ್ವಗಂಧ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸೋಸಿ ಕುಡಿಯುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಮಕ್ಕಳಾಗದ ಜೋಡಿ ಪ್ರತಿನಿತ್ಯ ಇದನ್ನು ಕುಡಿಯುತ್ತ ಬರುವುದು ಸಹಕಾರಿ. ದೇಹದ ಎಲ್ಲ ರೀತಿಯ ಆರೋಗ್ಯವರ್ಧನೆಗೂ ಅಶ್ವಗಂಧ ಸಹಕಾರಿಯಾಗಬಲ್ಲದು. ಒಂದು ಲೋಟ ಕಾಯಿಹಾಲನ್ನು ಕಾಯಿಸಲು ಇಟ್ಟು ಅದಕ್ಕೆ ಒಂದು ಚಮಚ ಅಶ್ವಗಂಧ ಪುಡಿ, ಸ್ವಲ್ಪ ಬೆಲ್ಲ ಹಾಗೂ ಏಲಕ್ಕಿ ಹಾಕಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಸುಸ್ತು ಕಡಿಮೆಯಾಗಿ ಶಕ್ತಿ ಬರುತ್ತದೆ. ಸಂತಾನೋತ್ಪತ್ತಿ ಕ್ರಿಯೆಗೆ ಸಹಕಾರಿಯಾಗುತ್ತದೆ. ಮಕ್ಕಳಾಗದ ಜೋಡಿಯು ಅರ್ಧಲೋಟದಂತೆ ಪ್ರತಿನಿತ್ಯ ಕುಡಿಯುತ್ತ ಬಂದರೆ ಸಮಸ್ಯೆ ನಿವಾರಣೆಗೆ ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ಕಂಡುಬರುವ ಎಡಿಎಚ್​ಡಿ ಯ ನಿರ್ವಹಣೆಯಲ್ಲಿ ಸಹಕಾರಿ. ಅನೇಕ ವೈದ್ಯಕೀಯ ಸಂಶೋಧನೆಗಳು ಅಶ್ವಗಂಧದ ಬಳಕೆಯು ಮಕ್ಕಳಲ್ಲಿನ ಈ ಎಡಿಎಚ್​ಡಿ ಸಮಸ್ಯೆಯನ್ನು ನಿಯಂತ್ರಣ ಮಾಡುತ್ತವೆ ಎಂಬುದಾಗಿ ಸಾಕ್ಷೀಕರಿಸಿವೆ. ಹಿಮ್ಮೆದುಳಿನ ಕ್ರಮಭಂಗ (ಸೆರೆಬ್ರಲ್ ಎಟಾಕ್ಷಿಯಾ) ಎಂಬ ಮಿದುಳಿಗೆ ಸಂಬಂಧಿಸಿದ ಸಮಸ್ಯೆಯಲ್ಲಿ ಅಶ್ವಗಂಧ ಸಹಕಾರಿ. ದೇಹದಲ್ಲಿ ಕೆಟ್ಟಕೊಲೆಸ್ಟ್ರಾಲ್ ಕಡಿಮೆ ಮಾಡಲು ಅಶ್ವಗಂಧವು ಹೆಚ್ಚು ಅನುಕೂಲಕಾರಿ. ಇನ್ನೂ ಅನೇಕ ಪದಾರ್ಥಗಳೊಂದಿಗೆ ಅಶ್ವಗಂಧದ ನಿರ್ದಿಷ್ಟ ಸಪ್ಲಿಮೆಂಟ್ ಸೇರಿಸಿ ತೆಗೆದುಕೊಳ್ಳುವುದರಿಂದ ಆರ್ಥರೈಟಿಸ್​ನ ನಿರ್ವಹಣೆ ಸಾಧ್ಯ. ರ್ಪಾನ್​ಸನ್ ಖಾಯಿಲೆಯಲ್ಲಿ ಅಶ್ವಗಂಧವು ಸಹಕಾರಿಯಾಗಬಲ್ಲುದೆಂದು ಅಧ್ಯಯನಗಳು ಸಾಬೀತುಪಡಿಸಿವೆ. ಟ್ಯೂಮರ್, ಟ್ಯೂಬರ್​ಕ್ಯುಲೋಸಿಸ್, ಲಿವರ್ ಸಮಸ್ಯೆಗಳು, ಇನ್​ಪ್ಲಮೇಶನ್ (ಉರಿಯೂತ), ವಾಂತಿಯನ್ನು ಕಡಿಮೆ ಮಾಡಲು ಸಹಕಾರಿ. ಜೀರ್ಣಕ್ರಿಯೆಯನ್ನು ವೃದ್ಧಿಸುವುದು. ಇದು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಗುಣ ಹೊಂದಿದೆ. ಹೀಗೆ ಇನ್ನೂ ಅನೇಕ ಸಮಸ್ಯೆಗಳಿಗೆ ಅಶ್ವಗಂಧವು ಸಹಾಯಕಾರಿಯಾಗಿದ್ದು, ಸುಮಾರು ಮೂರು ಸಾವಿರ ವರ್ಷಗಳಿಂದಲೂ ಅಶ್ವಗಂಧದ ಬಳಕೆ ಭಾರತೀಯ ಚಿಕಿತ್ಸಾಪದ್ಧತಿಯಲ್ಲಿದೆ. ಅನೇಕ ವಿದೇಶಗಳೂ ಇದರ ಮಹತ್ವವನ್ನರಿತಿದ್ದು ಔಷಧಿ ತಯಾರಿಕೆಯಲ್ಲಿ ಬಳಸುತ್ತಿದ್ದಾರೆ. ನಾವೂ ಅದರ ಸದ್ಬಳಕೆ ಮಾಡಿಕೊಳ್ಳೋಣ.
ಕೊನೇ ಹನಿ
ಎಳನೀರಿಗೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಉರಿಮೂತ್ರ ನಿವಾರಣೆಯಾಗುವುದು.
ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...