ಆಲೋವೆರಾ ನಿಮ್ಮ ಸೌಂದರ್ಯದ ಜೊತೆ ಆರೋಗ್ಯವನ್ನು ವೃದ್ದಿಸುತ್ತದೆ ಅನ್ನೋದು ಗೊತ್ತಾ?
ಭಾರತೀಯ ವೈದ್ಯ ಪದ್ದತಿಯಲ್ಲಿ ಆಯುರ್ವೇದದಲ್ಲಿ ನಮ್ಮ ಸುತ್ತಲಿನ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ರೋಗ ನಿವಾರಣೆ ಮಾಡಿಕೊಳ್ಳಬಹುದು. ಮನೆಯಲ್ಲೇ ಔಷಧಿ ಸಸ್ಯಗಳನ್ನು ಬೆಳೆಸಿ ಚಿಕಿತ್ಸಾ ಉಪಯೋಗವನ್ನು ಪಡೆದುಕೊಳ್ಳಬಹುದು.
ಅಂತಹ ಗಿಡಮೂಲಿಕೆಗಳಲ್ಲಿ ಲೋಳೆಸರವೂ ಕೂಡ ಪ್ರಮುಖವಾದ ದಿವ್ಯ ಔಷಧಿಯ ಸಸ್ಯ.
ಇದರ ಮೂಲಸ್ಥಾನ ಉತ್ತರ ಆಫ್ರಿಕಾ. ಈ ಸಸ್ಯವನ್ನ ಕ್ರಿ.ಶ ಒಂದನೆಯಶತಮಾನದಿಂದಲೂ ಗಿಡಮೂಲಿಕೆಯ ಸಸ್ಯವೆಂದು ಗುರತಿಸಿಕೊಂಡಿದೆ.
ಇದರ ಮೂಲಸ್ಥಾನ ಉತ್ತರ ಆಫ್ರಿಕಾ. ಈ ಸಸ್ಯವನ್ನ ಕ್ರಿ.ಶ ಒಂದನೆಯಶತಮಾನದಿಂದಲೂ ಗಿಡಮೂಲಿಕೆಯ ಸಸ್ಯವೆಂದು ಗುರತಿಸಿಕೊಂಡಿದೆ.
ಲೋಳೆಸರ ಅಥವಾ ಆಲೋವೆರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳವ ಇದು ಲಿಲ್ಲಿಯೇಸಿಯಾ ಎಂಬ ಕುಟುಂಬಕ್ಕೆ ಸೇರಿದ ರಸಭರಿತ ಸಸ್ಯ.
ಈ ಸಸ್ಯಗಳು ಸ್ವಾಭಾವಿಕವಾಗಿ ಹುಟ್ಟದೇ ಇದ್ದರು ಸಸ್ಯಗಳ ಗುಂಪಿನಲ್ಲಿ ಬೆಳೆಯುತ್ತವೆ. ಲೋಳೆಸರ ಅತಿ ಚಿಕ್ಕ ಬೇರುಳ್ಳ ಅಂಟು ರಸಭರಿತ ಗಿಡ. ಇದರ ಎಲೆಗಳು ದಪ್ಪ ಮತ್ತು ಮೆದುವಾಗಿದ್ದು ಹಸಿರು ಬಣ್ಣದಿಂದ ಕೂಡಿರುತ್ತದೆ. ಸಸ್ಯದಲ್ಲಿ ಮುಳ್ಳುಗಳೇ ಪ್ರಧಾನವಾಗಿದ್ದು ಎಲೆಯ ಅಂಚುಗಳಲ್ಲಿ ಮುಳ್ಳುಗಳು ಬೆಳೆಯುತ್ತದೆ.. ಹಾಗೂ ಬೇಸಿಗೆಯಲ್ಲಿ ಹೂ ಬಿಡುವ ಸಾಧ್ಯತೆಗಳು ಇರುತ್ತದೆ.ಈ ಸಸ್ಯ ಹೆಚ್ಚಾಗಿ ಬುಡದಿಂದಲೇ ಕವಲುಗಳಾಗಿ ಬೆಳೆಯುತ್ತವೆ.
ಸಸ್ಯದ ಬೇರುಗಳು ಹೆಚ್ಚಾಗಿ ಆಳಕ್ಕೆ ಇಳಿಯುವುದಿಲ್ಲ. ಸುಮಾರು 30 ರಿಂದ 60 ಸೆಂಟಿ ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಅಗಲವಾದ ಎಲೆಯುಳ್ಳ ಸಸ್ಯ. ಗಟ್ಟಿ ಸಸ್ಯವಾದುದರಿಂದ ಮತ್ತು ಕಹಿ ಗುಣವನ್ನು ಹೊಂದಿರುವುದರಿಂದ ಕೀಟಗಳ ಹಾವಳಿ ಕಡಿಮೆ ಎಂದೇ ಹೇಳಬಹುದು.
ಲೋಳೆಸರ ಇತ್ತೀಚಿಗೆ ಎಲ್ಲಾರಿಗೂ ಗೊತ್ತಿರುವಂತದ್ದು ಹಾಗೂ ಎಲ್ಲಾರಿಗೂ ಪರಿಚಯ ಇರುವಂತದ್ದೆ ಯಾಕಂದ್ರೆ ಸಾಧಾರಣವಾಗಿ ಎಲ್ಲಾರ ಮೆನೆಯಲ್ಲಿ ಇದ್ದೇ ಇರುತ್ತದೆ. ಈ ದಿವ್ಯ ಔಷಧಿಯ ಸಸ್ಯವನ್ನು ಕೆಲವರು ಪಾಟ್‍ಗಳಲ್ಲಿ ಗಾರ್ಡ್‍ನ್ ಅಂದಕ್ಕೆ ಬೆಳೆಸುತ್ತಾರೆ.
ಇನ್ನು ಕೆಲವರ ಮನೆಯಂಗಳಲ್ಲಿ ಅಥವಾ ಹಿತ್ತಲಿನಲ್ಲೋ ತಾವೇ ಬೆಳೆದು ನಿಂತಿರುತ್ತದೆ. ಲೋಳೆಸರ ಮನೆಯಲ್ಲೇ ಇದ್ದರು ಅದರ ಉಪಯೋಗ ಮಾತ್ರ ಎಷ್ಟೋ ಜನರಿಗೆ ತಿಳಿದೆ ಇರೋದಿಲ್ಲ. ತಿಳಿದಿದ್ದರು ಅದನ್ನು ಹೇಗೆ ಬಳಕೆ ಮಾಡಬೇಕೆಂಬುದು ಗೊತ್ತಿಲ್ಲದೆ ಬಳಕೆ ಮಾಡುವ ಗೋಜಿಗೆ ಹೋಗುವುದಿಲ್ಲ.
ಇದರಲ್ಲಿ ಬೇಕಾದಷ್ಟು ಪೋಷಕಾಂಶ ಮತ್ತು ಖನಿಜಾಂಶಗಳು ಹೇರಳವಾಗಿದೆ. ಕ್ಯಾಲ್ಸೀಯಂ, ಪೊಟ್ಯಾಶಿಯಂ, ಮೆಗ್ನೀಶಿಯಂ, ಜೀವಸತ್ವಗಳು ಇರುವುದರಿಂದ ಲೋಳೆಸರವನ್ನು ಬಹಳ ಹಿಂದಿನಿಂದಲೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಪ್ರತಿಯೊಂದು ಔಷಧಿಯಲ್ಲಿ ಲೋಳೆಸರದ ಪಾಲು ಇದ್ದೇ ಇರುತ್ತದೆ.
ಆಯುರ್ವೇದಲ್ಲಿ ನಮಗೆ ಸಿಕ್ಕುವಂತಹ ಕೆಲವು ಔಷಧಿಗಳಲ್ಲಿ ಅಲೋವೆರಾದಿಂದಾನೆ ಮಾಡಿರುವುದ್ದಾಗಿರುತ್ತದೆ.. ಇದಕ್ಕೆ ಪ್ರಮುಖ ಸ್ಥಾನ ದೊರೆತಿದೆ.
ಮಕ್ಕಳಿಗೆ ಬರುವ ಯಕೃತ್ ಸಮಸ್ಯೆಗೆ ಇದು ಹೇಳಿ ಮಾಡಿಸಿದಂತ ಔಷದಿ. ಸಮಸ್ಯೆ ಅದು ಎಷ್ಟೇ ತೀವೃತವಾಗಿರಲಿ ಅದೆಲ್ಲವನ್ನು ಸುಲಭವಾಗಿ ವಾಸಿಮಾಡಬಹುದು.
ಲೋಳೆಸರಕ್ಕೆ ಶುದ್ಧ ಅರಿಶಿನ ಮಿಶ್ರಣ ಮಾಡಿ ಅದನ್ನು ಮೂರು ದಿನಗಳ ಕಾಲ ಬೆಳಿಗ್ಗೆ ರಾತ್ರಿ ಸೇವನೆ ಮಾಡಿದರೆ ಯಕೃತ್ ಸಮಸ್ಯೆ ಪರಿಹಾರವಾಗುತ್ತದೆ.ಸಂಸ್ಕøತದಲ್ಲಿ ಇದರ ಹೆಸರು ಕುಮಾರಿ ಎಂದು ಕರೆಯುತ್ತಾರೆ..
ಕುಮಾರಿ ಎಂದರೆ ಹೆಣ್ಣು ಮಕ್ಕಳಿಗೆ ಇದು ಬಹುಳ ಸೀಮಿತವಾಗಿರುವ ಸಸ್ಯ. ಹೆಣ್ಣು ಮಕ್ಕಳಿಗೆ ಬರುವ ಯಾವುದೇ ಸಮಸ್ಯೆ ಇದ್ದರು ಉಪಯೋಗದಿಂದ ಪರಿಹಾರ ಕಂಡುಕೊಳ್ಳಬಹುದು.
ಅಲೋವೆರ ನೀರು ಲಭ್ಯವಿಲ್ಲದ ಸಮಯದಲ್ಲಿ ಎಲೆಯದಲ್ಲಿರುವ ಕ್ಲೋರೋಫಿಲ್ ಮಡಿದು, ರೋಡೋಕ್ಸಾನ್ಥಿನ್ ಅನ್ನುವ ಕೆಂಪು ಬಣ್ಣದ ಪದಾರ್ಥ ಹುಟ್ಟುತ್ತದೆ. ಇದರಿಂದ ಎಲೆಗಳು ಕೆಂಪಾಗಿ ಕಾಣಿಸುತ್ತದೆ. ಮತ್ತು ನೀರು ಸಿಕ್ಕಿದಾಗ ಎಲೆಗಳಲ್ಲಿ ಕ್ಲೋರೋಫಿಲ್ ವೃದ್ಧಿ ಆಗುತ್ತದೆ,. ಹೆಚ್ಚು ಕಡಿಮೆ ಎಲ್ಲಾ ಲೋಳೆಸರ ಗಿಡಗಳು ಇಂತಹ ಲಕ್ಷಣವನ್ನು ಹೊಂದಿರುತ್ತವೆ. ಈ ಗುಣವನ್ನು ಆಫ್ಟಿಕಲ್ ಪ್ರಾಪರ್ಟಿ ಎಂದು ಕರೆಯುತ್ತಾರೆ.
ಲೋಳೆರಸದಲ್ಲಿ ಸಿಗುವ ಅಂಟು ರೀತಿಯ ತಿರುಳಕ್ಕೆ ಬೆಣ್ಣೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಹರೆದಂತೆ ಮಾಡಿ ದೇಹದ ಯಾವುದೇ ಸುಟ್ಟ ಗಾಯದ ಭಾಗಗಳಿಗೆ ಹಚ್ಚಿದರೆ ತಕ್ಷಣವೇ ಹಚ್ಚಿದಲ್ಲಿ ಗಾಯದ ನೋವು ಕಡಿಮೆಯಾಗಿ ಬೊಬ್ಬೆಗಳು ಬರುವುದಿಲ್ಲ. ಮತ್ತೆ ಸುಟ್ಟ ಗಾಯದ ಕಲೆ ಅಥವಾ ಮಚ್ಚೆಗಳು ಉಳಿಯದಂತೆ ಕಾಪಾಡುತ್ತದೆ.
ಲೋಳೆಸರವನ್ನು ಬಿಸಿ ಮಾಡಿ ಆ ರಸಕ್ಕೆ ಎರಡು ಹನಿ ಜೇನು ತುಪ್ಪ ಬೆರಸಿ ತೀವ್ರ ಕೆಮ್ಮಿನಿಂದ ಬಳಲುತ್ತಿರುವವರಿಗೆ ಕುಡಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ತಿರುಳನ್ನು ನಿತ್ಯ ಸೇವಿಸಿದರೆ ಜಠರದ ಹುಣ್ಣು ಮತ್ತು ಮೂಲವ್ಯಾದಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಾಮಬಾಣದಂತೆ ಪರಿಣಮಿಸಿ ಶೀಘ್ರದಲ್ಲೆ ಗುಣ ಮಾಡುತ್ತದೆ.
ಇನ್ನೂ ತಲೆಯ ಕೂದಲಿನ ಸಮಸ್ಯೆಗೂ ಕೂಡ ನಮಗೆ ಇದರಿಂದಲೇ ಪರಿಹಾರ ಸಿಗುತ್ತದೆ. ಇದಕ್ಕೂ ಒಳಗೆ ಇರುವ ತಿರುಳನ್ನು ಚೆನ್ನಾಗಿ ಹರಿದು ಹರಿದಂತಹ ಭಾಗವನ್ನು ಚೆನ್ನಾಗಿ ಹಚ್ಚಿ 15 ನಿಮಿಷಗಳ ನಂತರ ಸ್ವಚ್ಛ ಮಾಡಿದರೆ ತಲೆಯ ಕೂದಲು ಉದುರುವುದು ಕಡಿಮೆಯಾಗುತ್ತದೆ, ಹೊಟ್ಟಿನ ಅಂಶವೂ ಕಡಿಮೆಯಾಗಿ ಕೂದಲು ಮೃದುವಾಗಿ ಸೊಂಪಾಗಿ ಬೆಳೆಯುವುದರ ಜೊತೆಗೆ ಹೊಳಪು ಬರುತ್ತದೆ.
ಇನ್ನೂ ಮೂಳೆಗಳಲ್ಲಿರುವ ಸೈವೋನಿಯರ್ ಅಂಶ ಒಣಗಿದಾಗಲೇ ಕೀಲುಗಳಲ್ಲಿ ನೋವುಂಟಾಗಿ ಸಂಧಿವಾತಕ್ಕೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರವಾಗಿ 2 ಚಮಚ ಲೋಳೆಸರವನ್ನು ದಿನ್ಕೆಕ ಮೂರು ಬಾರಿ ತೆಗೆದುಕೊಳ್ಳಬೇಕು.. ಊಟಕ್ಕೆ ಮುನ್ನ 30 ನಿಮಿಷ ಮುಂಚೆ ತೆಗೆದುಕೊಳ್ಳಬೇಕು ಅಲ್ಲದೇ ಲೋಳೆಸರವನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಂಡರೆ ಲೋಳೆಸರದಲ್ಲಿನ ಫಂಗಸ್ ವಿರೋಧಿ ಅಂಶ ಮತ್ತು ಉರಿ ನಿವಾರಕ ಅಂಶ ಮೂಳೆಗಳು ಒಂದಕ್ಕೊಂದು ತಾಗಿ ಸವೆಯುವುದನ್ನು ತಪ್ಪಿಸುತ್ತದೆ.
ಬ್ಯಾಂಕಾಕ್‍ನ ವಿಶ್ವವಿದ್ಯಾಲಯವೊಂದು ನಡೆಸಿದ ಪ್ರಯೋಗದಿಂದ ಲೋಳೆಸರದಿಂದ ಮಧುಮೇಹವನ್ನು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ. ಮಧುಮೇಹಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಲೋಳೆಸರ ಸೇವಿಸಿದವರಲ್ಲಿ ಶೇಕಡ 43 ರಷ್ಟು ಸಕ್ಕರೆ ಅಂಶ ಕಡಿಮೆಯಾಗಿ ಕಂಡು ಬಂದಿತ್ತು.. ಇದೀಗ ಸಕ್ಕರೆ ಖಾಯಿಲೇಗೂ ಇದನ್ನು ಬಳಕೆ ಮಾಡಲಾಗುತ್ತಿದೆ.
ಲೋಳೆಸರ ಹೊಟ್ಟೆಯಲ್ಲಿ ಮತ್ತು ರಕ್ತದಲ್ಲಿ ಆಸಿಡ್ ಅಂಶವನ್ನು ಕಡಿಮೆ ಮಾಡಿ ಅಲ್ಸರ್ ಸಾಧ್ಯತೆಯನ್ನು ತಳ್ಳಿಹಾಕಿ ಪರೋಕ್ಷವಾಗಿ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.. ಮತ್ತು ರಕ್ತನಾಳಗಳನ್ನೂ ಸದೃಡಗೊಳಿಸುತ್ತದೆ.
ಜೀರ್ಣಕ್ರಿಯೆ ವೃದ್ಧಿ ಆಗುವುದಕ್ಕೆ, ಎದೆ ಉರಿಯನ್ನು ಕಡಿಮೆ ಮಾಡುವುದರಲ್ಲಿ ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾದಿಗಳ ನಿವಾರಣೆಗೆ ಲೋಳೆಸರ ಚೆನ್ನಾಗಿ ಕೆಲಸ ಮಾಡುತ್ತದೆ.
ಜೀರ್ಣಕ್ರಿಯೆ ವೃದ್ಧಿ ಆಗುವುದಕ್ಕೆ, ಎದೆ ಉರಿಯನ್ನು ಕಡಿಮೆ ಮಾಡುವುದರಲ್ಲಿ ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾದಿಗಳ ನಿವಾರಣೆಗೆ ಲೋಳೆಸರ ಚೆನ್ನಾಗಿ ಕೆಲಸ ಮಾಡುತ್ತದೆ.
ಇದಕ್ಕೆ ನೀರು ಹಾಕಿದರು ಬೆಳೆಯುತ್ತದೆ, ನೀರು ಹಾಕದೆ ಇದ್ದರೂ ಅದರ ಪಾಡಿಗೆ ಅದು ಬೆಳೆಯುತ್ತದೆ. ತಿಂಗಳು ಗಟ್ಟಲೇ ನೀರು ಹಾಕದೆ ಇದ್ದರು ಗಿಡ ಸಾಯುವುದಿಲ್ಲ. ಕೆಲವರು ಮನೆಯಂಗಳದಲ್ಲಿ ಬೆಳೆಯುತ್ತಿದ್ದರೆ ತಮ್ಮ ಜಮೀನಿನಲ್ಲಿ ಬೆಳೆದು ಒಂದು ಲಾಭಂಶ ಪಡೆಯುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೌಂದರ್ಯವರ್ಧಕಗಳು, ಕ್ರೀಮ್‍ಗಳು, ಜೆಲ್‍ಗಳಲ್ಲಿ ಉಪಯೋಗಿಸಲಾಗುತ್ತಿದ್ದು ಇದಕ್ಕೆ ಬೇಡಿಕೆ ಇನ್ನೂ ಹೆಚ್ಚುತ್ತಿದೆ. ಇಷ್ಟೇ ಅಲ್ಲದೇ ಆಲೋವೆರಾ ಪಾನಿಯವನ್ನು ತಯಾರಿಸಿ ಲಾಭಾಂಶ ಮಾಡುತ್ತಿದ್ದಾರೆ. ಇದರ ಹೊರತಾಗಿ ಲೋಳೆಸರದಲ್ಲಿ ಇನ್ನೂ ಹಲವು ಪ್ರಯೋಜನವಿದ್ದು ನಿರಂತರವಾಗಿ ಲೋಳೆಸರ ಸೇವನೆ ಮಾಡುತ್ತಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾಯಿಲೆ ಖಸಾಲೆ ಇದ್ಯಾವುದೂ ಹತ್ತಿರ ಸುಳಿಯದೇ ಆರೋಗ್ಯವಾಗಿ ಇಡುತ್ತದೆ.
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:
Post a Comment