Sunday, October 21, 2018

ಪಲಾವ್ ಎಲೆ, ಬಾಸುಮತಿ ಎಲೆ


ಪಲಾವ್ ಎಲೆ, ಬಾಸುಮತಿ ಎಲೆ

ಪಲಾವ್ ಎಲೆ, ಬಾಸುಮತಿ ಎಲೆ ಎಂದೆಲ್ಲ ಕರೆಯುವ ಈ ಎಲೆಗಳು ಆಹಾರಕ್ಕೆ ವಿಶೇಷ ಪರಿಮಳವನ್ನು ಕೊಡುತ್ತದೆ.ಇದನ್ನು ಸಸ್ಯಹಾರ ಮಾಂಸಹಾರ ಮತ್ತು ಸಿಹಿತಿಂಡಿಗಳಲ್ಲಿ ಬಳಸುತ್ತಾರೆ
ಪಾಂಡನಸ್ ಅಮರಿಲ್ಲಿಫೋಲಿಸ್ (Pandanus amaryllifolius) ಇದರ ಸಸ್ಯ ಶಾಸ್ತ್ರೀಯ ಹೆಸರು.ಕೇದಿಗೆ, ತಾಳೆ ಗಿಡಗಳ ಪಾಂಡನೇಸಿ ಕುಟುಂಬಕ್ಕೆ ಸೇರಿರುವ ಈ ಗಿಡವು ಥೈಲ್ಯಾಂಡ್ ಶ್ರೀಲಂಕ ನ್ಯೂಗಿನಿ ಇಂಡೋನೆಷಿಯಾ ವಿಯೆಟ್ನಾಮ್ ದಕ್ಷಿಣ ಭಾರತ ಮುಂತಾದ ಮಳೆಕಾಡಿರುವ ದೇಶಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.ಎಲೆಗಳನ್ನು ಕತ್ತರಿಸುತ್ತಿದ್ದರೆ ಪುಟ್ಟದಾಗಿಯೇ ಇರುವ ಇದು ಆಳೆತ್ತರಕ್ಕೆ ಬೆಳೆಯುವ ಗಿಡ.ಹಿತ್ತಲಿನಲ್ಲಿ ಪಾಟ್ ನಲ್ಲಿಯೂ ಇದನ್ನು ಬೆಳೆಯಬಹುದು.ಅಡಿಟಾಲ್ ಪೈರೊಲಿನ್ ಎಂಬ ರಾಸಾಯನಿಕವು ಈ ವಿಶೇಷವಾದ ಪರಿಮಳಕ್ಕೆ ಕಾರಣವಾಗಿದೆ.ತಾಳೆ,ಕೇದಿಗೆ ಗಿಡಗಳಲ್ಲಿ ಈ ಸುವಾಸನೆಯು ಹೂವು ಹಣ್ಣುಗಳಲ್ಲಿರುವುದು.ಈ ಗಿಡ ಹೂವು ಬಿಡದ ಕಾರಣ ಇದರ ಎಲೆಗಳು ಈ ಗುಣವನ್ನು ಪಡೆದಿವೆ.ಬಾಸುಮತಿಯಲ್ಲಿಯೂ ಈ ಗುಣಗಳಿರುವುದರಿಂದ ಇದನ್ನು ಬಾಸುಮತಿ ಎಲೆ ಎಂದು ಕರೆಯುವರು.ಆದರೆ ಬಾಸುಮತಿಯ ಸುವಾಸನೆಗಿಂತಲೂ ಹತ್ತುಪಟ್ಟು ಹೆಚ್ಚು ಸುವಾಸನೆಯನ್ನು ಈ ಎಲೆಗಳು ಹೊಂದಿರುವುದರಿಂದ ಸಾಧಾರಣ ಅಕ್ಕಿಯಿಂದ ಮಾಡಿದ ಆಹಾರಗಳಿಗೂ ಇದು ವಿಶೇಷ ಪರಿಮಳ ಕೊಡಲು ಸಾಧ್ಯವಾಗಿದೆ.
ಜೊತೆಗೆ ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣದಿಂದಾಗಿ ಹಲವು ಕಾಯಿಲೆಗಳನ್ನು ಹತೋಟಿಯಲ್ಲಿಡಬಹುದು ದೇಹದೊಳಗಿನ ಮುಕ್ತ ಅಣುಗಳನ್ನು ಹೊರ ಹಾಕುವದರ ಜೊತೆಗೆ ಸೂಪರ್ ಆಕ್ಸೈಡ್ ಆನಯಾನ್ ಮತ್ತುಕಬ್ಬಿಣದ ಮುಕ್ತ ಅಣುಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ..ಇದರ ಎಲೆಗಳ ಕಷಾಯ ಸೇವಿಸುವುದರಿಂದ ರಕ್ತದೊತ್ತಡ ಸಕ್ಕರೆ ಕಾಯಿಲೆ ಯೂರಿಕ್ ಆಸಿಡ್ ಕಿಡ್ನಿ ಸ್ಟೋನ್ ಕ್ಯಾನ್ಸರ್ ಕಾಯಿಲೆಗಳನ್ನು ತಡೆಗಟ್ಟಬಹುದೆಂದು ಸಾಬೀತಾಗಿದೆ.
ಊಟ ಮಾಡಿದ ಸ್ವಲ್ಪ ಹೊತ್ತಿಗೆ ನಾಲಿಗೆ ಗಂಟಲಿನಲ್ಲಾಗುವ ಹುಣ್ಣುಗಳು, ತುಟಿ ಕೆಂಪಾಗಿ ಉರಿಯುವುದು, ಎದೆ ಉರಿ ಇವೆಲ್ಲ ಕೆಲವೊಮ್ಮೆ ಆಕ್ಸಿಡೆಂಟ್ ಗಳ ಪ್ರಭಾವದಿಂದಾಗುತ್ತವೆ.ಆಗ ಇದರ ಎಲೆಯ ಅಥವಾ ಬೇರಿನ ಕಷಾಯ ಕುಡಿಯುವುದರಿಂದ ಉಪಶಮನ ಸಾಧ್ಯ.ರಾತ್ರಿ ಮಲಗುವಾಗ ಹಾಲಿನಲ್ಲಿ ಕುದಿಸಿ ಶೋದಿಸಿ ಸಕ್ಕರೆ ಹಾಕಿ ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರುವುದು.ಇದರ ರಸ ಲೇಪನ ದಿಂದ ಚರ್ಮಕ್ಕೆ ಹೆಚ್ಚಿನ ಹೊಳಪು ಸಿಗುವುದು.ಕೂದಲಿನ ಆರೈಕೆಯಲ್ಲೂ ಇದರ ರಸ ಬಳಸುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಗಟ್ಟಿ ತಲೆಹೊಟ್ಟನ್ನು ನಿವಾರಿಸಿ ಕೂದಲ ಬೆಳವಣಿಗೆಗೆ ಸಹಕಾರಿಯಾಗುವುದು.ಮೈಕೈ ನೋವಿಗೆ ಇದರ ಎಲೆಯ ರಸದಿಂದ ಮಾಡಿದ ಎಣ್ಣೆ ರಾಮಬಾಣ.
ಗಿಡದಿಂದ ಕೊಯ್ದ ಎಲೆಗಳ ಬುಡಕ್ಕೆ ನೀರು ಹಾಕಿ ಬಕೇಟ್ ನಲಿಟ್ಟರೆ ಅಥವಾ ನೀರು ಚಿಮುಕಿಸುತ್ತಿದ್ದರೆ 3-4ದಿನಗಳ ಕಾಲ ತಾಜತನದಿಂದಿರುತ್ತವೆ.
ಇದನ್ನು ಕಂದುಗಳ ಮೂಲಕ ನೆಡಬಹುದು.ಬೇರುಗಳ ಮೂಲಕ ಹೊಸ ಗಿಡಗಳು ಹುಟ್ಟುತ್ತವೆ.ನೀರು ಚೆನ್ನಾಗಿರುವ ಜಾಗದಲ್ಲಿ ವರ್ಷಪೂರ್ತಿ ಹಸಿರಾಗಿರುತ್ತವೆ. ಮಳೆಗಾಲದಲ್ಲಿ ಕಂದು ಮುರಿದರೆ ಗಿಡ ಸಾಯುವ ಸಾಧ್ಯತೆ ಹೆಚ್ಚು.ಮುರಿದ ಬಾಗಕ್ಕೆ ಶಿಲೀಂಧ್ರ ನಾಶಕ ಹಚ್ಚಬೇಕು.
ಈ ಗಿಡದ ಎಲೆಗಳ ಬಳಕೆಯಿಂದ ಇಲ್ಲಿಯವರೆಗೆ ಯಾವುದೇ ಅಡ್ಡ ಪರಿಣಾಮಗಳು ಬೆಳಕಿಗೆ ಬಂದಿಲ್ಲ.


ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಉತ್ತರಣೆ ಗಿಡ


ಉತ್ತರಣೆ ಗಿಡ
ಉತ್ತರಣೆ ಗಿಡವನ್ನು ನಾವು ಹಲವು ಕಡೆಗಳಲ್ಲಿ ಕಂಡಿರುತ್ತೇವೆ ಇದು ನಾವು ದಾರಿಯಲ್ಲಿ. ಪೊದೆಗಳಲ್ಲಿ ಬೆಳೆಯುತ್ತದೆ. ಎಲ್ಲೆಂದರಲ್ಲಿ ಹದವಾಗಿ , ಸೊಂಪಾಗಿಬೆಳೆಯುವ ಈ ಉತ್ತರಣೆ ಗಿಡ ಹಲವು ರೋಗಗಳನ್ನು, ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ.
*ಜಾಂಡೀಸ್ ನಿವಾರಣೆಗೆ : 10 ಗ್ರಾಂ ಉತ್ತರಣೆ ಬೀಜಗಳನ್ನು ರಾತ್ರಿ ನೆನೆಹಾಕಿ ಬೆಳೆಗ್ಗೆ ಚೆನ್ನಾಗಿ ರುಬ್ಬಿ, ಮಜ್ಜಿಗೆಯೊಂದಿಗೆ ಸೇವಿಸಬೇಕು. (ಒಂದು ವಾರ) ಪಥ್ಯ: ತಿಳಿಸಾರು, ಅನ್ನ, ಎಣ್ಣೆ ಸೇವಿಸಕೂಡದು.
*ಸರ್ಪ ವಿಷ ನಿವಾರಣೆಗೆ: ಉತ್ತರಣೆಯ ಬೇರು, ಕರಿಮೆಣಸು, ಎರಡನ್ನು ಸಮ ಪ್ರಮಾಣದಲ್ಲಿ ಚೂರ್ಣಿಸಿಕೊಂಡು, ಒಂದು ಚಮಚದಷ್ಟು ನುಣ್ಣನೆಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಸಬೇಕು. ವಿಷವು ನಿವಾರಣೆಯಾಗುವವರೆಗೂ ಆಗಾಗ ಕುಡಿಸುತ್ತಿರಬೇಕು.
*ಬಂಜೆತನದಲ್ಲಿ: ಉತ್ತರಾಣಿ ಗಿಡದ ಹೂಗೊಂಚಲುಗಳನ್ನು ತಂದು ಎಮ್ಮೆ ಹಾಲಿನಲ್ಲಿ ನಯವಾಗಿ ಅರೆದು ಬಟ್ಟೆಯಲ್ಲಿ ಶೋಧಿಸುವುದು. ದಿವಸಕ್ಕೆ 10 ಗ್ರಾಂನಷ್ಟು ಹಾಲನ್ನು ಮುಟ್ಟಾಗಿರುವಾಗ ಐದು ದಿವಸ ಸೇವಿಸುವುದು. ಹಾಲು ಅನ್ನ ಪಥ್ಯ, ಶಾಂತಚಿತ್ತರಾಗಿರುವುದು. ಹೀಗೆ ಕ್ರಮವಾಗಿ ಮೂರು ಮುಟ್ಟಿನಲ್ಲಿ ಮಾಡಬೇಕು.
*ಇಸಬಿಗೆ : ಕೆಂಪು ಉತ್ತರಾಣಿ ಗಿಡವನ್ನು ಬೇರು ಸಹಿತ ತಂದು, ಸುಟ್ಟು ಬೂದಿ ಮಾಡುವುದು. 20 ಗ್ರಾಂ ಈ ಬೂದಿಗೆ 5 ಗ್ರಾಂ ವೀಳೆದೆಲೆಗೆ ಹಾಕುವ ಸುಣ್ಣ ಮತ್ತು 5 ಗ್ರಾಂ ಅರಿಶಿಣದ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಶೋಧಿಸಿದ ಗೋಮೂತ್ರದಲ್ಲಿ ಅರೆದು ಹಚ್ಚುವುದು.
*ಪೆಟ್ಟು ತಾಗಿ, ರಕ್ತ ಸೋರುತ್ತಿದ್ದರೆ: ಕೆಂಪು ಉತ್ತರಾಣಿ ಗಿಡದ ಸೊಪ್ಪಿನ ರಸವನ್ನು ಗಾಯದ ಮೇಲೆ ಹಿಂಡುವುದು. ತಕ್ಷಣ ರಕ್ತಸ್ರಾವ ನಿಲ್ಲುವುದು ಮತ್ತು ಗಾಯವು ಕ್ರಮೇಣ ವಾಸಿಯಾಗುವುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಸಂಪಿಗೆ


ಸಂಪಿಗೆ
ಸುವಾಸಿತ ಸಂಪಿಗೆ ಹೂವನ್ನು ದೇವರಿಗೆ ಹಾಗೂ ಹೆಣ್ಣು ಮಕ್ಕಳು ತಲೆಗೆ ಮುಡಿಯಲು ಬಳಸುತ್ತಾರೆ. ಇದರಲ್ಲಿ 2 ಬಗೆ ಕೆಂಡ ಸಂಪಿಗೆ ಮತ್ತು ಬಿಳಿ ಸಂಪಿಗೆ. ಸಂಪಿಗೆ ಹೂವು ಮತ್ತು ಮರದ ಚಕ್ಕೆ ಔಷಧೀಯ ಗುಣಗಳನ್ನು ಹೊಂದಿದೆ.
-ಸಂಪಿಗೆ ಮರದ ಚಕ್ಕೆಯ ಕಷಾಯವನ್ನು ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
-ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ಅದು ತಣ್ಣಗಾದ ನಂತರ ನೀರನ್ನು ಸೇವಿಸಿದರೆ ಹೊಟ್ಟೆ ಉರಿ ಕಡಿಮೆಯಾಗುತ್ತದೆ.
-ಸಂಪಿಗೆ ಮರದ ಎಲೆಗಳ ರಸವನ್ನು ಜೇನುತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.
-ಸಂಪಿಗೆ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ತಲೆ ನೋವು ಮತ್ತು ದೇಹದಲ್ಲಾಗುವ ಗಂಟುಗಳ ನೋವಿಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
-ಹೆಣ್ಣು ಮಕ್ಕಳ ಮುಟ್ಟಿನ ಸಮಯದ ಕಡಿಮೆ ರಕ್ತಸ್ರಾವ ಆಗುತ್ತಿದ್ದರೆ ಸಂಪಿಗೆ ಮರದ ಚಕ್ಕೆಯ ರಸಕ್ಕೆ ಜೀರಿಗೆ ಪುಡಿ ಮತ್ತು ಸಕ್ಕರೆ ಸೇರಿಸಿ ಸೇವಿಸಿದರೆ ರಕ್ತಸ್ರಾವ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ.
-ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ಅದು ಆರಿದ ನಂತರ ಸೇವಿಸಿದರೆ ಕಟ್ಟಿಕೊಂಡಿರುವ ಮೂತ್ರ ಸಲೀಸಾಗಿ ಹೋಗುತ್ತದೆ.
-ದೇಹದ ಯಾವುದಾದರು ಭಾಗದಲ್ಲಿ ದೊಡ್ಡ ಗಾಯವಾಗಿದ್ದರೆ ಸಂಪಿಗೆ ಮರದ ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆದರೆ ಗಾಯ ಬೇಗ ವಾಸಿಯಾಗುತ್ತದೆ.
-ಪ್ರತಿ ದಿನ ಸಂಪಿಗೆ ಮರದ ಎಲೆಗಳನ್ನು ಬಿಸಿ ನೀರಲ್ಲಿ ಹಾಕಿ ಆ ನೀರಲ್ಲಿ ಕಾಲಿಟ್ಟುಕೊಳ್ಳಬೇಕು. ನಂತರ ಸಂಪಿಗೆಯ ಮೊಗ್ಗು ಮತ್ತು ಬೀಜವನ್ನು ಅರೆದು ಹಿಮ್ಮಡಿಗೆ ಲೇಪಮಾಡುತ್ತಿದ್ದರೆ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಕುಪ್ಪಿ ಗಿಡ


ಕುಪ್ಪಿ ಗಿಡ

ವಾತನೋವು ಸೆಳೆತಕ್ಕೆ :-

ಹಸೀ ಕುಪ್ಪಿ ಎಲೆಗಳನ್ನು ಜಜ್ಜಿ, ಎಳ್ಳೆಣ್ಣೆಯಲ್ಲಿ ಬೆರೆಸಿ, ತೈಲ ಉಳಿಯುವಂತೆ ಕಾಯಿಸಿ, ಶೋಧಿಸಿಟ್ಟುಕೊಳ್ಳುವುದು. ಬೇಕಾದರೆ ಸುಗಂಧ ವಸ್ತುಗಳ ಚೂರ್ಣವನ್ನು ಸೇರಿಸಿಕೊಳ್ಳಬಹುದು. ನೋವಿರುವ ಕಡೆಗೆ ಹಚ್ಚುವುದು.

ಮಲಬದ್ಧತೆಗೆ :-

ಮಕ್ಕಳು ಮಲಬದ್ಧತೆಯಾಗಿ ಅಳುತ್ತಿದ್ದರೆ ಹಸೀ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಸ್ವಲ್ಪ ಭಾಗವನ್ನು ಮಲದ್ವಾರದಲ್ಲಿ ಸೇರಿಸುವುದು.

ಮಕ್ಕಳ ಶೀತ ವ್ಯಾಧಿಗೆ :-

ಹಸೀ ಎಲೆಗಳ ರಸವನ್ನು ಸ್ವಲ್ಪ ಜೇನು ಸೇರಿಸಿ ನೆಕ್ಕುವುದು. ಮೊದಲು ಸ್ವಲ್ಪ ವಾಂತಿಯಾಗಿ, ನಂತರ ವಾಸಿಯಾಗುವುದು. ಈ ರಸ ಸೇವಿಸುವುದರಿಂದ ದೊಡ್ಡವರಲ್ಲಿ ಕೆಮ್ಮು, ಕಫ, ದಮ್ಮು ಗುಣವಾಗುವುದು.

ಮಕ್ಕಳ ಹೊಟ್ಟೆನೋವಿಗೆ :-

ಬೆಳ್ಳುಳ್ಳಿ ಮೆಣಸು ಇವುಗಳ ಸಮತೂಕದ ಎರಡು ಭಾಗ ಕುಪ್ಪಿ ಸೊಪ್ಪನ್ನು ಸೇರಿಸಿ, ನುಣ್ಣಗೆ ಅರೆದು, ಸ್ವಲ್ಪ ಭಾಗವನ್ನು ಹಾಲಿನಲ್ಲಿ ಕದಡಿ ಕುಡಿಸುವುದು.

ಪೀನಾಸಿ ರೋಗಕ್ಕೆ(ಮೂಗಿಗೆ ವಾಸನೆ ತಿಳಿಯದಿರುವುದು) :-

ಒಂದು ಬೆಳ್ಳುಳ್ಳಿ ಹಿಲಕು, ಒಂದು ಮೆಣಸಿನಕಾಳು ಮತ್ತು ನಾಲ್ಕೈದು ಕುಪ್ಪಿ ಎಲೆಗಳನ್ನು ಸೇರಿಸಿ, ನುಣ್ಣಗೆ ಅರೆದು ಬಟ್ಟೆಯಲ್ಲಿ ಶೋಧಿಸಿ ಮೂಗಿನ ಎರಡೂ ಹೊಳ್ಳೆಗಳಿಗೆ ನಾಲ್ಕೈದು ತೊಟ್ಟು ಬಿಡುವುದು.

ತುರಿಕೆ, ಕಜ್ಜಿಗೆ :-

ಹಸೀ ಎಲೆಗಳನ್ನು ತಂದು, ಸ್ವಲ್ಪ ಅಡಿಗೆ ಉಪ್ಪು ಸೇರಿಸಿ ನುಣ್ಣಗೆ ಕಲ್ಪತ್ತಿನಲ್ಲಿ ಅರೆದು ಪಟ್ಟು ಹಾಕುವುದು. ಸಿಪಲಿಸ್ ಎನ್ನುವ ಮರ್ಮಾಂಗ ಹುಣ್ಣಿಗೆ ಸಹ ಇದೇ ರೀತಿ ಚಿಕಿತ್ಸೆ ಮಾಡುವುದು.

ಮೂರ್ಛೆಗೆ :-

ಹಸೀ ಕುಪ್ಪಿ ಎಲೆಗಳ ರಸವನ್ನು ಮೂಗಿನ ಎರಡೂ ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು.ಬಹು ಬೇಗ ಪ್ರಜ್ಞೆ ಬಂದು ಎಚ್ಚರವಾಗುವುದು. ಒಂದೆರಡು ಬಾರಿ ತಣ್ಣೀರನ್ನು ಮುಖಕ್ಕೆ ತುಂತುರು ರೂಪದಂತೆ ಚಿಮುಕಿಸುವುದು. ಕಿವಿ ನೋವಿನಲ್ಲಿ ಎಲೆಗಳ ರಸವನ್ನು ನೋವಿರುವ ಕವಿಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು. ಸ್ವಲ್ಪ ಬಿಸಿ ಮಾಡಿ ಹಾಕುವುದು.


ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ನುಗ್ಗೆ ಮರ


ನುಗ್ಗೆ ಮರ
ನುಗ್ಗೆಯಲ್ಲಿ ಬಿಸುಡಲು ಏನಿಲ್ಲ. ಅದರ ಕಾಯಿ ಮಾತ್ರವಲ್ಲ; ಎಲೆ, ಬೇರು, ಹೂ, ತೊಗಟೆ ಎಲ್ಲವೂ ಬಳಕೆಯ ದೃಷ್ಟಿಯಿಂದ ಮಹತ್ವ ಪಡೆದಿವೆ. ಇದರ ಮರವನ್ನು ಕೆತ್ತಿದಾಗ ಒಸರುವ ಅಂಟನ್ನು ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ತಲೆಶೂಲೆ ಶೀಘ್ರ ಶಮನವಾಗುತ್ತದೆ ಎಂದಿದೆ ವೈದ್ಯಗ್ರಂಥ.
ನುಗ್ಗೆಕಾಯಿ ರಕ್ತವರ್ಧಕ. ಯಕೃತ್ ಮತ್ತು ಗುಲ್ಮ ವ್ಯಾಧಿಗಳಿಗೆ ರಾಮಬಾಣ ಎನ್ನುತ್ತಾನೆ ಚಕ್ರದತ್ತ. ಹಲ್ಲು ಮತ್ತು ವಸಡಿನ ರಕ್ಷಣೆಗೆ ಬೇಕಾದ `ಸಿ' ಜೀವಸತ್ವ ನಿಂಬೆ, ನೆಲ್ಲಿಕಾಯಿಯಲ್ಲಿ ಇರುವಷ್ಟೇ ಪ್ರಮಾಣದಲ್ಲಿ ನುಗ್ಗೆಕಾಯಿಯಲ್ಲಿ ಇದೆ.
ದವಡೆಯಿಂದ ರಕ್ತ ಸೋರುವ ಪಯೋರಿಯಾ ವ್ಯಾಧಿಗೆ ಅದು ಒಳ್ಳೆಯ ಮದ್ದು. ಶೀತ, ಕೆಮ್ಮು, ಕುಷ್ಠ, ಕ್ಷಯ, ಶೂಲ ರೋಗಗಳ ನಿವಾರಣೆಗೆ ಅದು ಮದ್ದಾಗಬಲ್ಲದು. ಕಬ್ಬಿಣ, ಶರ್ಕರ, ರಂಜಕ, ಪಿಷ್ಟ, ಸುಣ್ಣ, ಕೊಬ್ಬು, ನಾರು, ಫಾಸ್ಫರಸ್, ಅಲ್ಪ ಪ್ರಮಾಣದ `ಬಿ' ಅನ್ನಾಂಗ ಇರುವ ನುಗ್ಗೆ ಹಸಿವನ್ನು ವರ್ಧಿಸುತ್ತದೆ. ಸಂಧಿವಾತ, ಹೃದ್ರೋಗ, ರಕ್ತದ ಒತ್ತಡಗಳಿಗೂ ಮದ್ದಾಗುತ್ತದೆ.
ಉನ್ಮಾದ, ಗಂಡಮಾಲೆ ಚಿಕಿತ್ಸೆಗೆ ನುಗ್ಗೆಯ ಬೀಜ ಸಹಕಾರಿ. ಹುರಿದು ತಿನ್ನಲು ಸ್ವಾದಿಷ್ಟ. ಜ್ವರ, ಜಂತುಹುಳ, ಕಫ ನಿವಾರಕ. ನುಗ್ಗೆ ಬೀಜದಿಂದ ತೆಗೆದ ತೈಲ ಯಾವ ಚಳಿಗೂ ಗಟ್ಟಿಯಾಗದ ಕಾರಣ ಗಡಿಯಾರದ ಕೀಲೆಣ್ಣೆಗೆ ಉಪಯೋಗ ಆಗುತ್ತಿತ್ತು. ಬೀಜ ಮತ್ತು ಹೂಗಳ ತೈಲವು ಸಂಧಿವಾತ ನಿವಾರಕ. ಸೌಂದರ್ಯ ವೃದ್ಧಿಗೆ ಸಹಾಯಕ. ಸುಗಂಧಿತ ಹೂಗಳು ಎಣ್ಣೆಯಲ್ಲಿ ಹುರಿದು ತಿನ್ನಲು ರುಚಿಕರ. ಮೂತ್ರವರ್ಧಕ. ಹಾಲಿನೊಂದಿಗೆ ಬೇಯಿಸಿ ತಿಂದರೆ ವೀರ್ಯವರ್ಧಕ. ಬಂಜೆತನ ನಿವಾರಣೆ ಮಾಡುತ್ತದೆ. ಹೃದಯ ಚಿಕಿತ್ಸೆಗೆ ಬಳಸುವ ಬೆಂಜಾಲಮಿನ್, ಸ್ಟೆರೊಕಿನ್, ಮಾರಿಂಗಿನ್ ಎಂಬ ಕ್ಷಾರಗಳು ಹೂ, ಬೇರು, ತೊಗಟೆಗಳಿಂದ ದೊರಕುತ್ತವೆ.
ನುಗ್ಗೆಯ ಎಲೆಗಳಲ್ಲಿ ಪ್ರೊಟೀನ್, ಕೊಬ್ಬು, ಖನಿಜ, ಸುಣ್ಣ, ಫಾಸ್ಫರಸ್, `ಬಿ' ಅನ್ನಾಂಗಗಳಿವೆ. ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ, ಹೊಟ್ಟೆಯ ಕ್ರಿಮಿ, ನರ ದೌರ್ಬಲ್ಯ, ಅಶಕ್ತಿ ಪರಿಹರಿಸುತ್ತದೆ. ಮಕ್ಕಳ ಇರುಳುಗಣ್ಣು ತಡೆಗೆ ಉತ್ತಮ ಆಹಾರ. ಉಪ್ಪು, ನಿಂಬೆ ರಸ, ಕರಿಮೆಣಸಿನ ಪುಡಿಯೊಡನೆ ಬೇಯಿಸಿ ತಿಂದರೆ ಉಬ್ಬಸಕ್ಕೆ ಮದ್ದು. ಕ್ಷಯ ರೋಗವೂ ಶಮನ. ಹಸಿ ಎಲೆಗಳ ರಸ ಮತ್ತು ಹಾಲಿನ ಮಿಶ್ರಣ ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಟಿಕ. ಎದೆಹಾಲು ಹೆಚ್ಚುತ್ತದೆ.
ಎಕ್ಕ- ನುಗ್ಗೆಯ ಎಲೆಗಳನ್ನು ಅರೆದು ಮೂಲವ್ಯಾಧಿಯ ಮೊಳಕೆಗಳಿಗೆ ಹಚ್ಚಿದರೆ ತುರಿಕೆ, ನೋವು ಪರಿಹಾರ. ಎಳ್ಳೆಣ್ಣೆಯೊಂದಿಗೆ ಎಲೆಗಳ ರಸದಿಂದ ತಯಾರಿಸಿದ ತೈಲ ಜಜ್ಜಿದ ಗಾಯಗಳಿಗೆ ಮದ್ದು. ಮೂಗಿಗೆ ಸೇದಿದರೆ ನೆಗಡಿ ನಿವಾರಕ. ತೆಂಗಿನೆಣ್ಣೆಯಿಂದ ಮಾಡಿದ ತೈಲ ಕೇಶವರ್ಧಕ.
ನುಗ್ಗೆ - ದೇವದಾರು ಮರದ ತೊಗಟೆಗಳನ್ನು ಮಜ್ಜಿಗೆಯಲ್ಲಿ ಅರೆದು ಹಚ್ಚಿದರೆ ಗಂಡಮಾಲೆ ರೋಗಕ್ಕೆ ಸಿದ್ಧೌಷಧ. ವಾಯುವಿಡಂಗ ಮತ್ತು ನುಗ್ಗೆಯ ಹಸಿ ತೊಗಟೆಯಿಂದ ತಯಾರಿಸಿದ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಜಂತು ಹುಳಗಳು ಸಾಯುತ್ತವೆ.
ಮಧುಮೇಹ ರೋಗಿಗಳಿಗೆ ಗುಪ್ತಾಂಗದಲ್ಲಿ ನವೆಯಿದ್ದರೆ ನುಗ್ಗೆಯ ಹಸಿ ತೊಗಟೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಲೇಪಿಸಬಹುದು. ಇದರ ಬೇರಿನ ಗಂಧ ಲೇಪನವು ಶಕ್ತಿ ಪ್ರಚೋದಕ ಸಹ. ಸಾಸಿವೆಯೊಂದಿಗೆ ನುಗ್ಗೆ ಬೇರನ್ನು ಸೇರಿಸಿ ಮಾಡಿದ ಕಷಾಯ ದಿನ ಬಿಟ್ಟು ದಿನ ಬರುವ ಜ್ವರದ ನಿವಾರಕ. ಬೇರಿನಿಂದ ಭಟ್ಟಿ ಇಳಿಸಿದ ಸತ್ವಕ್ಕೆ ವಾತ ನಿರೋಧಕ ಗುಣವಿದೆ. ಜೇನುತುಪ್ಪ ಸೇರಿದರೆ ಸ್ವರ ಭಂಗ ನಿವಾರಿಸುತ್ತದೆ.
ನಾಯಿ ಕಚ್ಚಿದಾಗ ನುಗ್ಗೆ ಎಲೆ, ಅರಿಶಿಣ, ಬೆಳ್ಳುಳ್ಳಿಗಳನ್ನು ಅರೆದು ಹಚ್ಚಿದರೆ ಗುಣವಾಗುತ್ತದೆ. ಹಾವಿನ ವಿಷಕ್ಕೂ ನುಗ್ಗೆಯ ನಾನಾ ಭಾಗಗಳಿಂದ ಚಿಕಿತ್ಸೆ ಮಾಡುತ್ತಾರೆ. ಅದರ ಚಿಗುರೆಲೆಗಳನ್ನು ಅಕ್ಕಿ ತೊಳೆದ ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯವು ವ್ರಣಗಳನ್ನು ತೊಳೆಯಲು ಉಪಯುಕ್ತ ಕೀಟಾಣುನಾಶಕ.
ನುಗ್ಗೆ ಎಲೆಗಳ ರಸಕ್ಕೆ ನಿಂಬೆರಸ, ಜೇನು, ಎಳನೀರು ಬೆರೆಸಿ ಕುಡಿದರೆ ಆಮಶಂಕೆ, ಭೇದಿ ಶೀಘ್ರ ತಡೆಯಬಹುದು. ಬೂದುಗುಂಬಳದ ರಸದೊಂದಿಗೆ ನುಗ್ಗೆ ಎಲೆಗಳ ರಸ ಬೆರೆಸಿ ಕುಡಿಯುವುದರಿಂದ ಗರ್ಭಿಣಿಯರ ಕಾಲುಗಳಲ್ಲಿ ತುಂಬುವ ನೀರು
ಇಳಿಯುತ್ತದೆ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ತುಂಬೆ


ತುಂಬೆ 
Latin : LEUCES ASPERA ,Telugu : Tummi (ತುಮ್ಮಿ,Malayaalam Tumba , kamala –Tumbi,Sanskrit -Drona pushpi
Hindi - ಗಮ ಮಧು ಪಟ್ಟಿ
ಇದು ಸಾಮಾನ್ಯ ಔಷಧ ಗಿಡವಾಗಿ ಎಲ್ಲರಿಗೂ ತಿಳಿದಿದೆ .ಇದು ಅನೇಕ ಆಕಸ್ಮಿಕಗಳಲ್ಲಿ ಬಹಳ ಉಪಕಾರಿ . ಇದು ೧-೨ ಅಡಿಎತ್ತರಕ್ಕೆ ಬೆಳೆಯುತ್ತದೆ. ಅಲ್ಲಲ್ಲಿ ಗಂಟುಗಳು ಇರುತ್ತವೆ.ಅಲ್ಲದೆ ಎಲೆಗಳು ೨" ಉದ್ದವಾಗಿರುತ್ತವೆ, ೧/೪ ಇಂಚು ಅಗಲವಿರುತ್ತದೆಇಲಿಗಳ ಕಿವಿಗಳಂತೆ ಇದರ ಹೂವುಗಳು ಕೆಳಗಡೆ ಇರುತ್ತದೆ.ಹೂ ಬಿಳುಪಾಗಿರುತ್ತದೆ , ಒಂದೇ ದಳ ಇರುತ್ತದೆ . .
ಗಿಡದ ಉಪಯೋಗ :
ಇದರ ಎಲೆಗಳನ್ನು ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತವೆ .ಇವುಗಲ್ಲನ್ನು ಅನೇಕಸಲ ರೀಚಕವಾಗಿ ಮತ್ತು ಅನೇಕಸಲ ವಾಂತಿ ಮಾಡಿಸಲಿಕ್ಕಾಗಿ ವಿಷಾಹಾರ ಸೇವಿಸಿದಾಗ ಉಪಯೋಗಿಸುತ್ತಾರೆ.ಕಸವನ್ನು ಹೊರಗೆ ಹಾಕುತ್ತದೆ.ಸಾಮಾ ನ್ಯವಾಗಿ ದೇಹದ ತಾಪಮಾನವನ್ನು ಕಾಪಾಡುತ್ತದೆ .ದೃಷ್ಟಿಯನ್ನು ವೃದ್ಧಿಸುತ್ತದೆ. ಹೆಂಗಸರಿಗೆ ಆಗುವ ರಕ್ತ ಸ್ರಾವವನ್ನು ಕಡಿಮೆ ಮಾಡುತ್ತದೆ .
ಎಲೆಗಳು ಎಲ್ಲಾ ವಿಷಕಾರಿ ಸಣ್ಣ ಕ್ರಿಮಿಗಳನ್ನು ನಾಶ ಮಾಡುತ್ತದೆ .
ಹಾವು ಕಚ್ಚಿದಾಗ ಇದರ ಉಪಯೋಗದಿಂದ ಗುಣ ಪಡೆಯಬಹುದು .
ಉಪಯೋಗಿಸುವ ವಿಧಾನ :
ಹಾವು ಕಚ್ಚಿದ ತಕ್ಷಣ ೩/೪ ರಿಂದ 1 OZ .ಇದರ ಎಲೆಗಳ ರಸವನ್ನು ಬಾಯಿ ಮೂಲಕ ಕೊಡಬೇಕು.ತಕ್ಷಣ ೨-೩ ಸಲ ಭೇದಿಯಾಗಿ ಮತ್ತು ವಾಂತಿಯಾಗಿ ಹೊಟ್ಟೆಯೊಳಗಿನ ವಿಷವನ್ನು ಹೊರ ಹಾಕುತ್ತದೆ . ಆಗ ನಿಧಾನವಾಗಿ ದೇಹದ ತಾಪಮಾನ ಮರಳಿ ಮಾಮೂಲು ಸ್ಥಿತಿಗೆ ಬರುತ್ತದೆ .
ಹಾವು ಕಚ್ಚಿದ ೩೦ ತಾಸುಗಳ ವರೆಗೆ ಹಾವು ಕಚ್ಚಿದವರು ಎಚ್ಚರದಿಂದ ಇರಬೇಕು .೨ ದಿವಸ ಹೆಸರು ಬೇಳೆ ಅಣ್ಣ ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ್ದನ್ನು ಕೊಡಬೇಕು.ಉಪ್ಪು , ಮೆಣಸಿನಕಾಯಿ , ಹುಳಿ,ಮೆಣಸಿನಖಾರ, ಹುಳಿ ಇತಾದಿಗಳನ್ನು ೩ನೆ ದಿನದಿಂದ ತೆಗೆದುಕೊಳ್ಳಬಹುದು .
೧.ಒಂದು ಪಕ್ಷ ರೋಗಿ ಎಚ್ಚರ ತಪ್ಪಿ (ಪ್ರಜ್ಞಾಶೂನ್ಯ ) ಬಿದ್ದರೆ , ಬಾಯಿಯಲ್ಲಿ ಬುರುಗು ಇತ್ಯಾದಿ ಬಂದರೆ ಕೆಲವು ಹನಿ ದ್ರೋಣ ಪುಷ್ಪಿ (ತುಂಬಿ) ಎಲೆಯ ರಸವನ್ನು ಮೂಗಿನ ಹೊಲ್ಲೆಯಲ್ಲಿ ಹಾಕಬೇಕು .ನಂತರ ಸ್ವಲ್ಪ ಸಮಯದಲ್ಲೇ ಪ್ರಜ್ಞೆ ಬರುತ್ತದೆ .ನಂತರ 1oz (ಒಂದು ಔನ್ಸೆ) ರಸವನ್ನು ಬಯೋ ಮೂಲಕ ಕೊಡಿರಿ .ಅದರ ಎಲೆಗಳನ್ನು ಅರೆದು ಹಾವು ಕಚ್ಚಿದ ಜಾಗದಲ್ಲಿ ಹಚ್ಚಿರಿ (ಕಟ್ಟಿರಿ) .
೨.ಇದೆ ತರಹ ಚೇಳು ಕಚ್ಚಿದಾಗ ಅಥವಾ ಇನ್ನಾವುದೇ ಹುಳಗಳು ಕಚ್ಚಿದರೆ ಜೇನು ತುಪ್ಪದ ಜೊತೆ ಬಾಯಿ ಮೂಲಕ ಕೊಡಿರಿ ಮತ್ತು ಎಲೆಗಳನ್ನು ಅರೆದು ಕಚ್ಚಿದ ಜಾಗದಲ್ಲಿ ಹಚ್ಚಿರಿ.ಇದರಿಂದ ಕೂಡಲೇ ಗುಣ ಕಾಣಿಸುತ್ತದೆ .
೩.ಕಾಮಾಲೆ ರೋಗದಲ್ಲಿ (Jaundice) , ಎಚ್ಚರ ತಪ್ಪಿದಾಗ ಬಿಳಿ ಚಿಬ್ಬ್ಬಿನಲ್ಲಿ (White spots) , ತಲೆ ಸುತ್ತಿನಲ್ಲಿ ನೆಗಡಿಯಿಂದ ಮೂಗಿನಿಂದ ನೀರು ಇಳಿಯುತ್ತಿದರೆ , ತುಂಬಿ ರಸ (ಎಲೆಯಿಂದ) ಮೂಗಿಗೆ ಹಾಕಿದರೆ ಗುಣವಾಗುತ್ತದೆ.
೪. ತುಂಬಿ ಎಲೆ ಮತ್ತು ಉತ್ತರಾಣಿ ಎಲೆ (Dacmic extracts) ಎಲೆ ಸೇರಿಸಿ ಚೆನ್ನಾಗಿ ಅರೆದು . ಹಾಲಿನ (ಆಕಳ ಹಾಲಿನ) ಜೊತೆ ಬೆಳಗ್ಗೆ -ಸಾಯಂಕಾಲ ಹೆಣ್ಣು ಮಕ್ಕಳಿಗೆ ಮಾಸಿಕ ತೊಂದರೆ ಗಳಲ್ಲಿ (Irregulalr periods) ಹೆಚ್ಚು ರಕ್ತ ಸ್ರಾವವಗುತ್ತಿದರೆ ಇದರ ಸೇವನೆಯಿಂದ ತುಂಬಾ ಗುಣಕಾರಿಯಾಗುತ್ತದೆ.ಆದರೆ ಹುಳಿ , ಖಾರ ಇತ್ಯಾದಿಗಳನ್ನು ಬಿಡಬೇಕು
ಹೂಗಳ ಉಪಯೋಗ :
ತುಂಬಿ ಹೂಗಳ ರಸ ೪ ಹನಿಗಳು ಉತ್ತರಾಣಿ ಎಲೆಗಳ ರಸ ೨ ಹನಿ ಮತ್ತು ಮೆಣಸು ಪುಡಿ ೨ ಚಿಟಗಿ , ಜೇನು ತುಪ್ಪದ ಜೊತೆಗೆ ಮಕ್ಕಳಿಗೆ ಕೊಟ್ಟರೆ ಹೊಟ್ಟೆಯ ತೊಂದರೆಗಳು ಕಡಿಮೆಯಾಗುತ್ತದೆ .

ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ತುಳಸಿ


ತುಳಸಿ 
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ನಮ್ಮ ಮನೆಯಂಗಳದಲ್ಲಿ ಬೆಳೆಯುವ ಸಣ್ಣ ಗಿಡಗಳೂ ಸಹ ದೊಡ್ಡ ದೊಡ್ಡ ರೋಗಗಳಿಗೆ ಸಿದ್ಧೌಷಧವಾಗಿರುತ್ತದೆ. ಇದು ಒಂದು ಪವಿತ್ರವಾದ ಮೂಲಿಕೆಯಾಗಿದ್ದು, ಹಲವು ಪೂಜಾ ಕೆಲಸಗಳಲ್ಲಿ ಕೂಡಾ ಇದನ್ನು ಬಳಸುತ್ತಾರೆ. ಇದರಲ್ಲಿ ಅನೇಕ ಜೀವಸತ್ವಗಳು, ಖನಿಜಾಂಶಗಳು ಇದ್ದೂ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಇದ್ದೂ ದೇಹವನ್ನು ಆರೋಗ್ಯಯುತವಾಗಿ ಕಾಪಾಡಲು ಸಹಾಯಕಾರಿಯಾಗಿದೆ.
* ಮುಖದಲ್ಲಿ ಕಪ್ಪು ಕಲೆಗಳು ಹೆಚ್ಚಿದ್ದರೆ ತುಳಸಿ ಎಲೆಗಳ ರಸಕ್ಕೆ ನಿಂಬೆ ರಸ ಸೇರಿಸಿ ದಿನಕ್ಕೆ 2 ಬಾರಿ ಮೂಖಕ್ಕೆ ಲೇಪಿಸಿದರೆ ಕಲೆಗಳು ಮಾಯವಾಗುತ್ತದೆ
* ತುಳಸಿಯು ಜೀರ್ಣಕಾರಿ ನರಗಳ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಅಮೈನೋ ಆಮ್ಲಗಳು, ಕೊಲೆಸ್ಟರಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಚಯಾಪಚಯ ಕ್ರಿಯೆಯಲ್ಲಿ ಬಿಡುಗಡೆಯಾಗುವ ಕಿಣ್ವಗಳಿಗೆ ಪೂರೈಸುವ ಮೂಲಕ ಸಹಾಯ ಮಾಡುತ್ತದೆ
* ತುಳಸಿ ಎಲೆಗಳಿಗೆ ನೀರು ಮತ್ತು ಜೇನುತುಪ್ಪವನ್ನು ಸೇರಿಸಿ ಕಷಾಯ ಮಾಡಿ ರಾತ್ರಿ ಮಲಗುವ ಮುನ್ನ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ಹೇಳಲಾಗಿದೆ.

* ತುಳಸಿ ಎಲೆಗಳು ಮುಖದ ಮೇಲಿರುವ ಕಲ್ಮಶಗಳನ್ನು ತೆಗೆದುಹಾಕಲು ನೆರವಾಗುತ್ತವೆ. ತುಳಸಿ ಎಲೆ, ಶ್ರೀಗಂಧದ ಪೇಸ್ಟ್ ಮತ್ತು ರೋಸ್ ವಾಟರ್ ಅನ್ನು ಬೆರಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯುವುದರಿಂದ ಮುಖದ ಮೇಲಾಗುವ ಮೊಡವೆಯನ್ನು ತಡೆಯಬಹುದು.

* ಚರ್ಮದ ತುರಿಕೆ ಹೆಚ್ಚಿದ್ದರೆ ತುಳಸಿ ಎಲೆ ರಸಕ್ಕೆ ನಿಂಬೆ ರಸ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ತುರಿಕೆ ಬೇಗ ಕಡಿಮೆಯಾಗುತ್ತದೆ
* ಹುಳುಕಡ್ಡಿ ಆಗಿದ್ದರೆ ತುಳಸಿ ಎಲೆಯ ರಸಕ್ಕೆ ಉಪ್ಪು ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಶಮನವಾಗುತ್ತದೆ.
* ತುಳಸಿಯ ಸೇವನೆಯಿಂದ ಥೈರಾಯ್ಡ್ ಗ್ರಂಥಿಗಳು ಈ ಎಲ್ಲಾ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ
* ತುಳಸಿ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಎಲ್ಲಾ ರೀತಿಯ ಜ್ವರ ಶಮನವಾಗುತ್ತದೆ.
* ತುಳಸಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಆ ಪುಡಿಯನ್ನು ಸಾಸಿವೆ ಎಣ್ಣೆಯ ಜೊತೆ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ನೋವಿರುವ ಹಲ್ಲಿಗೆ ಹಚ್ಚಿ ಮಲಗಿದರೆ ಹಲ್ಲು ನೋವು ನಿವಾರಣೆಯಾಗುತ್ತದೆ.
ಹೀಗೆ ಸಕಲ ರೀತಿಯಲ್ಲಿ ಪ್ರಯೋಜನಕಾರಿಯಾಗಿರುವಂತ ತುಳಸಿಯು ಆರೋಗ್ಯದಾಯಕವಾಗಿದ್ದು ಸಾಕಷ್ಟು ಔಷಧಿಯ ಗುಣಗಳನ್ನು ಇದು ಹೊಂದಿದೆ ಇದು ಮನೆಯಲ್ಲಿಯೇ ಸಿಗುವ ಸುಲಭವಾದ ವಸ್ತುವಾಗಿರುವ ಕಾರಣ ಯಾವುದೇ ಅಡ್ಡಪರಿಣಾಮವಿಲ್ಲದೇ ಬಳಕೆ ಮಾಡಬಹುದು ಆದರೂ ಸಹ ವೈದ್ಯರ ಸಲಹೆ ಇದ್ದಲ್ಲಿ ಇನ್ನೂ ಉತ್ತಮ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...