Sunday, October 21, 2018

ಒಂದೆಲಗ

ಒಂದೆಲಗ
ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಕರಾವಳಿ ಪರಿಸರದಲ್ಲಿ ಭತ್ತದ ಗದ್ದೆಗಳ ಬದಿಯ ಜೌಗು ಪ್ರದೇಶದಲ್ಲಿ, ಅಡಿಕೆತೋಟಗಳಲ್ಲೂ ಹೇರಳವಾಗಿ ಬೆಳೆಯುತ್ತದೆ. ಕಾಂಡವು ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡು ೩,೪ ಅಂಗುಲ ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಹಸಿರು ಬಣ್ಣದಿಂದ ಕೂಡಿ ದುಂಡಗಾಗಿರುತ್ತವೆ.
ಸಂಸ್ಕೃತದಲ್ಲಿ ಮಂಡೂಕಪರ್ಣಿ, ಕನ್ನಡದಲ್ಲಿ ಒಂದೆಲಗ, ತುಳುವಿನಲ್ಲಿ ತಿಮಾರೆ, ಹಿಂದಿಯಲ್ಲಿ ಬ್ರಾಹ್ಮೀ, ತೆಲುಗಿನಲ್ಲಿ ಸರಸ್ವತೀ... ಇತ್ಯಾದಿ ಹೆಸರುಗಳು ಈ ಪುಟ್ಟ ಸಸ್ಯಕ್ಕೆ. ಸುಶ್ರುತ ಸಂಹಿತೆಯಲ್ಲಿಯೂ ಇದರ ಉಲ್ಲೇಖವಿದೆ.
*ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ.ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ.ಇದು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ.
* ದಿನಕ್ಕೆ 4-5 ಒಂದೆಲಗದ ಎಲೆಯನ್ನು ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.
* ಮಲಬದ್ಧತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ.
* ಬೇಸಿಗೆಯಲ್ಲಿ ದೇಹ ತಂಪಾಗಿಸಲು ಊಟದೊಂದಿಗೆ ಒಂದೆಲಗದ ಚಟ್ನಿ ಸೇವಿಸುವುದು ಆರೋಗ್ಯಕ್ಕೆ ಹಿತಕರ.
* ನಿದ್ರಾಹೀನತೆಯಿಂದ ಬಳಲುತ್ತಿರುವವರು ಒಂದೆಲಗದಿಂದ ತಯಾರಿಸಿದ ಗುಳಿಗೆಗಳನ್ನು ಸೇವಿಸಿದರೆ ಸುಖ ನಿದ್ದೆಯನ್ನು ನಮ್ಮದಾಗಿಸಿಕೊಳ್ಳಬಹದು. (ಒಂದೆಲಗದ ಎಲೆಗಳನ್ನು ಒಣಗಿಸಿ ಪುಡಿಮಾಡಿ ಅದರೊಂದಿಗೆ ಹುರಿದ ಗಸೆಗಸೆಯನ್ನು ಬೆರೆಸಬೇಕು, ಬಳಿಕ ಕಲ್ಲುಸಕ್ಕರೆಯ ಎಳೆಪಾಕ ಮಾಡಿ ಅದರಲ್ಲಿ ಈ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಕಲಕಬೇಕು ನಂತರ ತುಪ್ಪವನ್ನು ಸೇರಿಸಿ ಗಟ್ಟಿಯಾಗುತ್ತಲೇ ಒಲೆಯಿಂದ ಕೆಳಗಿಳಿಸಬೇಕು. ಮಿಶ್ರಣವು ಆರಿದ ಬಳಿಕ ಅಂದಾಜು ಗಾತ್ರದ ಗುಳಿಗೆಯನ್ನು ತಯಾರಿಸಬೇಕು. ನಿತ್ಯವೂ ಮಲಗುವ ಮುನ್ನ ಇದನ್ನು ಸೇವಿಸಿ ಹಾಲು ಕುಡಿದು ಮಲಗಿದರೆ ನಿದ್ರಾಹೀನತೆ ನಿವಾರಣೆಯಾಗುತ್ತದೆ.)
* ಒಂದೆಲಗದ ತೈಲವೂ ನಿದ್ರಾಹೀನತೆಗೆ ಪರಿಣಾಮಕಾರಿ. ಒಂದೆಲಗದ ತೈಲದಿಂದ ನಿತ್ಯವೂ ಶಿರೋಭಾಗವನ್ನು ಮಾಲೀಶು ಮಾಡಿ ಮಲಗಿದರೆ ಹಿತಕರ.(ಒಂದೆಲಗದ ರಸ ಒಂದು ಕಪ್‌, ಅಷ್ಟೇ ಪ್ರಮಾಣದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಬೇಕು. ಎರಡನ್ನೂ ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಿ ನೀರಿನ ಅಂಶ ಇಂಗುವವರೆಗೆ ಕಾಯಿಸಬೇಕು. ಈ ತೈಲ ನಿತ್ಯ ಹಚ್ಚಿದರೆ "ಕೇಶ್ಯ'ವೂ ಹೌದು-ಅಂದರೆ ಕೂದಲು ಸೊಂಪಾಗಿ ಬೆಳೆಯುತ್ತದೆ, ಹೊಟ್ಟು ನಿವಾರಣೆಯಾಗುತ್ತದೆ.)
* ನರದೌರ್ಬಲ್ಯ, ಆತಂಕ, ಒತ್ತಡ ನಿವಾರಣೆಗೆ ಹಾಗೂ ತಲೆನೋವು ನಿವಾರಣೆಯಾಗಲು ಒಂದೆಲಗದ ಕಷಾಯ ಹಿತಕರ. ಒಂದೆಲಗದ ಎಲೆಗಳನ್ನು ಒಂದು ಮುಷ್ಟಿಯಷ್ಟು ತೆಗೆದುಕೊಂಡು ಚೆನ್ನಾಗಿ ಅರೆದು ನೀರು ಸೇರಿಸಿ ಕುದಿಸಬೇಕು. ಆರಿದ ಬಳಿಕ ಜೇನು ಹಾಗೂ ಮೆಣಸಿನಕಾಳಿನ ಹುಡಿ ಬೆರೆಸಿ ದಿನಕ್ಕೆ 2-3 ಬಾರಿ ಸೇವಿಸಿದರೆ ಹಿತಕರ.
*ಅಪೌಷ್ಟಿಕತೆ ಹಾಗೂ ಪಿತ್ತದೋಷದ ದೃಷ್ಟಿಯಿಂದ ಅಧಿಕ ಕೂದಲು ಉದುರುವವರು ಒಂದೆಲಗದ ಕಾಂಡ ಸಹಿತ ಇಡೀ ಬಳ್ಳಿಯನ್ನು ತೊಳೆದು ಅರೆದು ಅದರ ರಸವನ್ನು ಸ್ವಲ್ಪ ಜೇನು ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಕೂದಲು ಉದುರುವುದು, ಕೂದಲು ಬೆಳ್ಳಗಾಗುವುದು ಕಡಿಮೆಯಾಗುತ್ತದೆ. ಇದೇ ಸಮಯದಲ್ಲಿ ಒಂದೆಲಗದ ತೈಲವನ್ನು ಕೂದಲಿಗೆ ಲೇಪಿಸುವುದೂ ಹಿತಕರ.
*ಮಕ್ಕಳಿಗೆ ಉಪಯುಕ್ತ ಆರೋಗ್ಯವರ್ಧಕ ಪೇಯಗಳು. ಚಹಾ ಕಾಫಿಯ ಬದಲಾಗಿ, ಈ ರುಚಿಕರ ಪೇಯವನ್ನು ನೀಡಿದರೆ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ಹಿತಕರ.
(ಒಂದು ಕಪ್‌ ಹಸುವಿನ ತುಪ್ಪಕ್ಕೆ ಅಷ್ಟೇ ಪ್ರಮಾಣದಲ್ಲಿ ಒಂದೆಲಗದ ಎಲೆಯ ರಸವನ್ನು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ನೀರಿನ ಅಂಶ ಆರಿಬರುತ್ತಲೇ "ಪಟಪಟ' ಸದ್ದು ನಿಂತು, ತುಪ್ಪ ಮತ್ತು ಒಂದೆಲಗದ ರಸದ ಘೃತಪಾಕವು ಉಂಟಾಗುತ್ತದೆ. ಈ ತುಪ್ಪದ ನಿತ್ಯಸೇವನೆ ಮನಸ್ಸಿನ ದುಗುಡ, ಆತಂಕ, ಖನ್ನತೆಗಳನ್ನು ನಿವಾರಿಸಿ ಮನಸ್ಸನ್ನು ಶಾಂತಗೊಳಿಸುವುದು. ಸ್ಮರಣಶಕ್ತಿ, ಬುದ್ಧಿಶಕ್ತಿ ಪ್ರಚೋದಕ. 1-2 ಚಮಚದಷ್ಟು ಈ ತುಪ್ಪವನ್ನು (ಮಕ್ಕಳ ಅಥವಾ ವಯಸ್ಕರ ವಯಸ್ಸಿಗೆ ತಕ್ಕಂತೆ) ಬಿಸಿ ಹಾಲಲ್ಲಿ ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಪರಿಣಾಮಕಾರಿ.)
* ಒಂದೆಲಗದ ಎಲೆಗಳನ್ನು ತೊಳೆದು, ನೆರಳಲ್ಲಿ ಒಣಗಿಸ ಬೇಕು. ಅಷ್ಟೇ ಪ್ರಮಾಣದ ಬಾದಾಮಿಯನ್ನು ಹುರಿದು ಇಡಬೇಕು. ಬಳಿಕ ಎರಡನ್ನೂ ಮಿಕ್ಸರ್‌ನಲ್ಲಿ ಪುಡಿಮಾಡಿ, ಸ್ವಲ್ಪ ಯಾಲಕ್ಕಿ ಹುಡಿ, ಶುದ್ಧ ಕೇಸರಿ ದಳಗಳನ್ನು ಬೆರೆಸಬೇಕು. ಈ ಪುಡಿಯನ್ನು 2 ಚಮಚದಷ್ಟು 1 ಕಪ್‌ ಹಾಲಿಗೆ ಬೆರೆಸಿ ಸ್ವಲ್ಪ ಕಲ್ಲುಸಕ್ಕರೆ ಅಥವಾ ಬೆಲ್ಲ ಬೆರೆಸಿ ನೀಡಬೇಕು. ಕಾದಾರಿದ ಹಾಲು ಅಥವಾ ತಂಪಾದ ಹಾಲಿಗೆ ಈ ಪುಡಿಯನ್ನು ಬೆರೆಸುವುದಾದರೆ ಕಲ್ಲುಸಕ್ಕರೆ ಅಥವಾ ಬೆಲ್ಲದ ಬದಲು ತಾಜಾ ಜೇನುತುಪ್ಪ ಬೆರೆಸಬಹುದು. ನಿತ್ಯ ಬೆಳಿಗ್ಗೆ ಈ ಪೇಯ ಬೆಳೆಯುವ ಮಕ್ಕಳಿಗೆ ನೀಡಿದರೆ ಉತ್ತಮ ಆರೋಗ್ಯವರ್ಧಕ ಪೇಯ.

ನಿದ್ದೆ ಗುಳಿಗೆ ತಯಾರಿಸುವ ವಿಧಾನ :
ಹಾಂ, ಆಧುನಿಕ ಜೀವನಶೈಲಿಯ ಒತ್ತಡ ಧಾವಂತಗಳು ನಿದ್ರಾಹೀನತೆಯನ್ನು ಹೆಚ್ಚಿಸಿವೆ. ಮನೆಯ ಅಂಗಳದ ಒಂದೆಲಗವನ್ನು ಉಪಯೋಗಿಸಿ ಗುಳಿಗೆ ತಯಾರಿಸಿ ಸೇವಿಸಿದರೆ ಸವಿನಿದ್ದೆ ಸಹಜವಾಗಿಯೇ ಉಂಟಾಗುತ್ತದೆ!
ಒಂದೆಲಗದ ಎಲೆಗಳನ್ನು ಒಣಗಿಸಿ ಪುಡಿಮಾಡಿ ಅದರೊಂದಿಗೆ ಹುರಿದ ಗಸೆಗಸೆಯನ್ನು ಬೆರೆಸಬೇಕು, ಬಳಿಕ ಕೆಂಪು ಕಲ್ಲುಸಕ್ಕರೆಯ ಎಳೆಪಾಕ ಮಾಡಿ ಅದರಲ್ಲಿ ಈ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಕಲಕಬೇಕು. ಕೊನೆಯಲ್ಲಿ ಹಸುವಿನ ತುಪ್ಪ ಸ್ವಲ್ಪ ಸೇರಿಸಿ ಗಟ್ಟಿಯಾಗುತ್ತಲೇ ಒಲೆಯಿಂದ ಕೆಳಗಿಳಿಸಬೇಕು.
ಈ ಮಿಶ್ರಣವು ಆರಿದ ಬಳಿಕ ಗಜ್ಜುಗದ ಗಾತ್ರದ ಗುಳಿಗೆಯನ್ನು ತಯಾರಿಸಬೇಕು. ನಿತ್ಯವೂ ಈ ಗುಳಿಗೆಯನ್ನು ಸೇವಿಸಿ ಹಾಲು ಕುಡಿದು ಮಲಗಿದರೆ ನಿದ್ರಾಹೀನತೆ ನಿವಾರಣೆಯಾಗುತ್ತದೆ.
.ನಿದ್ರಾಹೀನತೆಯಲ್ಲಿ ಒಂದೆಲಗದ ತೈಲವೂ ಪರಿಣಾಮಕಾರಿ. ಒಂದೆಲಗದ ಗುಳಿಗೆಯನ್ನು ಸೇವಿಸುವುದರ ಜೊತೆಗೆ, ಒಂದೆಲಗದ ತೈಲದಿಂದ ನಿತ್ಯವೂ ಶಿರೋಭಾಗವನ್ನು ಮಾಲೀಶು ಮಾಡಿ ಮಲಗಿದರೆ ಹಿತಕರ.
ಒಂದೆಲಗದ ತೈಲ ತಯಾರಿಸುವ ವಿಧಾನ :
ಒಂದೆಲಗದ ರಸ ಒಂದು ಕಪ್‌, ಅಷ್ಟೇ ಪ್ರಮಾಣದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಬೇಕು. ಎರಡನ್ನೂ ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಿ ನೀರಿನ ಅಂಶ ಇಂಗುವವರೆಗೆ ಕಾಯಿಸಬೇಕು. ಈ ತೈಲವನ್ನು ನಿತ್ಯ ಕೂದಲಿಗೆ ಲೇಪಿಸಿ, ತುದಿ ಬೆರಳಿನಿಂದ ಮಾಲೀಶು ಮಾಡಿದರೆ ಶಿರೋಭಾಗದಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ. ಮನಸ್ಸೂ ಪ್ರಶಾಂತವಾಗಿ ನಿದ್ರಾಹೀನತೆ ನಿವಾರಣೆಯಾಗುತ್ತದೆ. ಈ ತೈಲ ನಿತ್ಯ ಹಚ್ಚಿದರೆ "ಕೇಶ್ಯ'ವೂ ಹೌದು-ಅಂದರೆ ಕೂದಲು ಸೊಂಪಾಗಿ ಬೆಳೆಯುತ್ತದೆ, ಹೊಟ್ಟು ನಿವಾರಣೆಯಾಗುತ್ತದೆ.
.ನರದೌರ್ಬಲ್ಯ, ಆತಂಕ, ಒತ್ತಡ ನಿವಾರಣೆಗೆ ಹಾಗೂ ತಲೆನೋವು ನಿವಾರಣೆಯಾಗಲು ಒಂದೆಲಗದ ಕಷಾಯ ಹಿತಕರ. ಒಂದೆಲಗದ ಎಲೆಗಳನ್ನು ಒಂದು ಮುಷ್ಟಿಯಷ್ಟು ತೆಗೆದುಕೊಂಡು ಚೆನ್ನಾಗಿ ಅರೆದು ನೀರು ಸೇರಿಸಿ ಕುದಿಸಬೇಕು. ಆರಿದ ಬಳಿಕ ಜೇನು ಹಾಗೂ ಮೆಣಸಿನಕಾಳಿನ ಹುಡಿ ಬೆರೆಸಿ ದಿನಕ್ಕೆ 2-3 ಬಾರಿ ಸೇವಿಸಿದರೆ ಹಿತಕರ.
.ಹಾಲಿನಲ್ಲಿ ಜೀರಿಗೆಪುಡಿ ಹಾಗೂ ಒಣಗಿಸಿ ಹುಡಿಮಾಡಿದ ಒಂದೆಲಗದ ಪುಡಿಯನ್ನು ಬೆರೆಸಿ ಸೇವಿಸಿದರೆ ಬಾಣಂತಿಯಲ್ಲಿ ಎದೆಹಾಲು ವೃದ್ಧಿಯಾಗುತ್ತದೆ.
.ಮೂತ್ರ ಉರಿ, ಮೂತ್ರಕಟ್ಟು ಉಂಟಾದಾಗ ಒಂದು ಕಪ್‌ ಎಳನೀರಿನಲ್ಲಿ 4 ಚಮಚ ಒಂದೆಲಗದ ರಸ, ಅರ್ಧ ಚಮಚ ಕೊತ್ತಂಬರಿ ಬೀಜದ ಹುಡಿ ಬೆರೆಸಿ ಕುಡಿದರೆ ಶಮನಕಾರಿ.
.ಅಪೌಷ್ಟಿಕತೆ ಹಾಗೂ ಪಿತ್ತದೋಷದ ದೃಷ್ಟಿಯಿಂದ ಅಧಿಕ ಕೂದಲು ಉದುರುವವರು ಒಂದೆಲಗದ ಕಾಂಡ ಸಹಿತ ಇಡೀ ಬಳ್ಳಿಯನ್ನು ತೊಳೆದು ಅರೆದು ಅದರ ರಸವನ್ನು ಸ್ವಲ್ಪ ಜೇನು ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಕೂದಲು ಉದುರುವುದು, ಕೂದಲು ಬೆಳ್ಳಗಾಗುವುದು ಕಡಿಮೆಯಾಗುತ್ತದೆ. ಇದೇ ಸಮಯದಲ್ಲಿ ಒಂದೆಲಗದ ತೈಲವನ್ನು ಕೂದಲಿಗೆ ಲೇಪಿಸುವುದೂ ಹಿತಕರ.

ಕೃಪೆ : ಸಸ್ಯ ಕಣಜ

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ವೀಳ್ಯೆದೆಲೆ

ವೀಳ್ಯೆದೆಲೆ
ವೀಳ್ಯದೆಲೆ ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.
ವೀಳ್ಯದೆಲೆಯಿಂದಾದ ಹೆಂಡವನ್ನು ಆಯುರ್ವೇದದಲ್ಲಿ ಕೆಲ ರೋಗಗಳಿಗೆ ಮದ್ದನ್ನಾಗಿ ಉಪಯೋಗಿಸಲು ಹೇಳಿದೆ.
* ಪುಟ್ಟ ಮಕ್ಕಳಲ್ಲಿ ಹೊಟ್ಟೆ ಉಬ್ಬರ ಉಂಟಾಗಿ ಅಳುತ್ತಿದ್ದರೆ, ವೀಳ್ಯದೆಲೆಗೆ ಹರಳೆಣ್ಣೆ ಸವರಿ ಬೆಚ್ಚಗೆ ಮಾಡಿ ಅದರಿಂದ ಮಗುವಿನ ಹೊಟ್ಟೆಗೆ ಶಾಖ ನೀಡಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ ಗುಣವಾಗುತ್ತದೆ.
* ಮಕ್ಕಳಲ್ಲಿ ನೆಗಡಿ, ಕೆಮ್ಮು , ಕಫ‌ ಉಂಟಾದಾಗ ವೀಳ್ಯದೆಲೆಯ ರಸ, ತುಳಸೀರಸ, ದೊಡ್ಡಪತ್ರೆಯ ರಸ ಬೆರೆಸಿ, ಜೇನು ಸೇರಿಸಿ ನೀಡಿದರೆ ಗುಣಕಾರಿ.
* ದೀರ್ಘ‌ಕಾಲದ ಕೆಮ್ಮು , ದಮ್ಮು , ಕಫ‌ದಿಂದ ಬಳಲುವವರು, ವೀಳ್ಯದೆಲೆಯ ರಸ, ಬಿಳಿ ಈರುಳ್ಳಿಯ ರಸ ಹಾಗೂ ಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಕದಡಿ ದಿನಕ್ಕೆ 3-4 ಬಾರಿ ಸೇವಿಸಿದರೆ ಪರಿಣಾಮಕಾರಿ.
* 2 ಕಪ್‌ ಕೊಬ್ಬರಿ ಎಣ್ಣೆಗೆ ಅರ್ಧ ಕಪ್‌ ವೀಳ್ಯದೆಲೆಯ ರಸ ಮತ್ತು ಅರ್ಧ ಕಪ್‌ ಒಂದೆಲಗದ ರಸ ಬೆರೆಸಿ ಚೆನ್ನಾಗಿ ಕುದಿಸಿ ತೈಲಪಾಕ ಮಾಡಬೇಕು. ಈ ಎಣ್ಣೆಯನ್ನು ನಿತ್ಯ ತಲೆಯ ಕೂದಲಿಗೆ ಹಚ್ಚಿ ಮಾಲೀಶು ಮಾಡಬೇಕು. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೊಟ್ಟು ಉದುರುವುದು, ಕೂದಲು ಉದುರುವುದು ನಿವಾರಣೆಯಾಗುತ್ತದೆ.
* ವೀಳ್ಯದ ಎಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.
* ವೀಳ್ಯದೆಲೆಯಲ್ಲಿ ಕಾಚು, ಲವಂಗ, ಪಚ್ಚ ಕರ್ಪೂರ ಬೆರೆಸಿ ಜಗಿದು ಸೇವಿಸಿದರೆ ಹಲ್ಲುನೋವು, ಬಾವು ಪರಿಹಾರವಾಗುತ್ತದೆ.
* ವೀಳ್ಯದೆಲೆಯಲ್ಲಿ ಲವಂಗ ಮತ್ತು ಕಲ್ಲುಪ್ಪು ಇರಿಸಿ ಮಡಚಿ, ಬಾಯಲ್ಲಿಟ್ಟು ರಸ ಹೀರುವುದರಿಂದ ಗಂಟಲು ಕೆರೆತ, ಒಣಕೆಮ್ಮು ಗಂಟಲು ನೋವು ಗುಣವಾಗುತ್ತದೆ.
* 2 ವೀಳ್ಯದೆಲೆಯಲ್ಲಿ 4-6 ಲವಂಗವನ್ನಿಟ್ಟು ಜಗಿದು ತಿಂದರೆ ಅಜೀರ್ಣ, ಹೊಟ್ಟೆ ಉಬ್ಬರ, ನೋವು ಗುಣವಾಗುತ್ತದೆ.
* ತೀವ್ರವಾದ ಹಲ್ಲು ನೋವಿದ್ದಾಗ ವೀಳ್ಯದೆಲೆಯ ರಸದಲ್ಲಿ ಲವಂಗದ ಹುಡಿಯನ್ನು ಬೆರೆಸಿ, ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಬೇಕು. ಹಲ್ಲುನೋವು, ವಸಡುನೋವು, ಊತ ಕಡಿಮೆಯಾಗುತ್ತದೆ.
* 2 ವೀಳ್ಯದೆಲೆಯಲ್ಲಿ 4 ಪುದೀನಾ ಎಲೆ, 2 ಕಾಳುಮೆಣಸಿನ ಪುಡಿ, ಚಿಟಿಕೆ ಉಪ್ಪು , 4 ಯಾಲಕ್ಕಿ ಕಾಳುಗಳನ್ನು ಇರಿಸಿ, ಮಡಚಿ ಜಗಿದು ನುಂಗಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ, ಅಜೀರ್ಣ, ಅಪಚನ ನಿವಾರಣೆಯಾಗುತ್ತದೆ.
* ಗರ್ಭಿಣ ಸ್ತ್ರೀಯರಲ್ಲಿ ವಾಕರಿಕೆ, ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜೊತೆಗೆ 4 ಯಾಲಕ್ಕಿ ಕಾಳುಗಳನ್ನಿಟ್ಟು ಜಗಿದು ರಸ ಹೀರಿದರೆ ಶಮನಕಾರಿ.
* 2 ಎಳೆಯ ವೀಳ್ಯದೆಲೆಯಲ್ಲಿ ಅಡಿಕೆಯನ್ನಿಟ್ಟು , ಕಾಚಿನ ಹುಡಿ (ಖದಿರದ ಹುಡಿ) ಬೆರೆಸಿ ಜಗಿಯುತ್ತಿದ್ದರೆ ವಸಡಿನಲ್ಲಿ ಉಂಟಾಗುವ ರಕ್ತಸ್ರಾವ ನಿವಾರಣೆಯಾಗುತ್ತದೆ.
* ವೀಳ್ಯದೆಲೆಯಲ್ಲಿ ಎಳೆಯ ಅಡಿಕೆಯ ಚೂರುಗಳನ್ನು ಇರಿಸಿ ಜಗಿದು ನುಂಗಬೇಕು. ಹೀಗೆ ದಿನಕ್ಕೆ 2-3 ಬಾರಿ ಸೇವಿಸಿದರೆ ಆಮಶಂಕೆ ನಿವಾರಣೆಯಾಗುತ್ತದೆ.
* ಗಾಯ ಉಂಟಾದಾಗ, ತುರಿಕೆ ಕಜ್ಜಿಗಳಿಗೆ ವೀಳ್ಯದೆಲೆಯ ರಸದಲ್ಲಿ 4-6 ಹನಿ ನಿಂಬೆರಸ ಬೆರೆಸಿ ಹಚ್ಚಿದರೆ ಗುಣಕಾರಿ.
* ಕಾಲರಾ ರೋಗದಲ್ಲಿ ಉಂಟಾಗುವ ತೀವ್ರವಾದ ಮೀನಖಂಡಗಳ ನೋವು ಗುಣಮುಖವಾಗಲು ವೀಳ್ಯದೆಲೆಗೆ ಬೇವಿನ ಎಣ್ಣೆ ಸವರಿ ಜಗಿದು ರಸ ನುಂಗಬೇಕು. ವೀಳ್ಯದೆಲೆಯ ರಸದಲ್ಲಿ ಕರ್ಪೂರ ಬೆರೆಸಿ ಕಾಲುಗಳಿಗೆ ಮಾಲೀಶು ಮಾಡಬೇಕು.
* ವೀಳ್ಯದೆಲೆಯೊಂದಿಗೆ ಕಾಳುಮೆಣಸು, ಒಣ ಶುಂಠಿ ಅರೆದು ಸೇವಿಸಿದರೆ ಕಫ‌ಯುಕ್ತ ಕೆಮ್ಮು , ದಮ್ಮು ಶಮನವಾಗುತ್ತದೆ.
* ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ.
* ವೀಳ್ಯದೆಲೆಯ ರಸದಲ್ಲಿ ದಾಲ್ಚಿನ್ನಿ ಪುಡಿ ಬೆರೆಸಿ ಸಂಧಿಗಳಿಗೆ ಲೇಪಿಸಿದರೆ ಸಂಧಿಶೂಲ, ಬಾವು ಗುಣಮುಖವಾಗುತ್ತದೆ.
* ವೀಳ್ಯದೆಲೆಯ ರಸದಲ್ಲಿ ಮಗುವಿನ ವಯಸ್ಸಿಗೆ ತಕ್ಕಂತೆ ಗೋರೋಚನವನ್ನು ಬೆರೆಸಿ ನೀಡಿದರೆ ಮಕ್ಕಳ ಜ್ವರ, ನೆಗಡಿ, ಕೆಮ್ಮು ಪರಿಹಾರವಾಗುತ್ತದೆ.ಅಥವಾ ಸೊಂಟನೋವು ಹಾಗೂ ಸೊಂಟದ ಭಾಗದಿಂದ ಹೊಟ್ಟೆಯನ್ನು ಆವರಿಸಿ ಕಾಲುಗಳಿಗೆ ಹಬ್ಬುವಂಥ ನೋವು ಉಂಟಾದರೆ ತಕ್ಷಣ ತಜ್ಞ ವೈದ್ಯರಿಂದ ತಪಾಸಿಸುವುದು ಅಗತ್ಯ. ಇದರಿಂದ ಅವಧಿಪೂರ್ವ ರಕ್ತಸ್ರಾವವನ್ನು ನಿಲ್ಲಿಸಿ, ಗರ್ಭಸ್ರಾವ ಅಥವಾ ಗರ್ಭಪಾತವನ್ನು ತಪ್ಪಿಸಬಹುದು.

ಕೃಪೆ : ಸಸ್ಯ ಕಣಜ

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಕಾಮಕಸ್ತೂರಿ

ಕಾಮಕಸ್ತೂರಿ
ಇದು ತುಳಸಿಯ ಜಾತಿಗೆ ಸೇರಿದ ಸುವಾಸನೆಯುಳ್ಳ ಗಿಡವಾಗಿದೆ.ದೇಹದ ಉಷ್ಣತೆಯನ್ನು ಹೀರುವ ಗುಣವಿರುವ ಕಾರಣಕ್ಕೆ ಇದರ ಬೀಜವನ್ನು ನೆನೆಹಾಕಿ ಉಪವಾಸ ಮಾಡುವ ಸಮಯದಲ್ಲಿ ಸೇವಿಸುತ್ತಾರೆ.ಯಾಕೆಂದರೆ ಉಪವಾಸ ಇರುವಾಗ ಉಂಟಾಗುವ ಅಸಿಡಿಟಿ ಮತ್ತು ಮಲಬಧ್ಧತೆಯನ್ನು ಇದು ಹೋಗಲಾಡಿಸುತ್ತದೆ.ಇದನ್ನು ನೀರಿನಲ್ಲಿ ನೆನೆಸಿದಾಗ ಲೋಳೆಯಂತೆ ಉಬ್ಬಿಕೊಳ್ಳುವುದು.ಹೀಗೆ ನೆನೆಸಿದ ಬೀಜವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುವುದು, ಅಜೀರ್ಣ ವಾಸಿಯಾಗುವುದು.ಕೆಮ್ಮು ಶೀತವನ್ನು ಹೋಗಲಾಡಿಸುವುದು.ದೇಹದಲ್ಲಿ ಬೇಡವಾದ ಅಶುದ್ದವನ್ನು ಹೊರಹಾಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು,ನೆನೆದ ಬೀಜಗಳನ್ನು ಹಾಲಿನಜೊತೆ ಕಲ್ಲುಸಕ್ಕರೆ ಬೆರೆಸಿ ಸೇವಿಸುವುದರಿಂದ ಪಿತ್ತಶಮನವಾಗುವುದು.ಹಲ್ಲಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕ್ಯಾನ್ಸರ್ ಕಣಗಳ ವಿರುದ್ದ ಹೋರಾಡುವ ಶಕ್ತಿಯೂ ಇದಕ್ಕಿದೆ.ಇದರ ಸೇವನೆಯಿಂದ ಮನಸ್ಸಿಗೆ ಹಿತ ಹಾಗೂ ಶಾಂತವಾದ ಪರಿಣಾಮ ಬೀರುವುದರಿಂದ ಮಾನಸಿಕ ವ್ಯಾದಿಗಳಲ್ಲಿ ಇದು ಉಪಯೋಗವಾಗುತ್ತದೆ.ನೆನೆದ ಬೀಜ ಜ್ಯೂಸ್ ಸಲಾಡ್ಸ್ ಗೆ ವಿಶೇಷ ರುಚಿ ಕೊಡುವುದು. ದೇಹದ ದುರ್ಗಂಧಕ್ಕೆ ಇದರ ಎಲೆಗಳ ರಸ ಹಚ್ಚಿದರೆ ಕ್ರಮೇಣ ದುರ್ಗಂಧ ದೂರವಾಗುವುದು.

ಕೃಪೆ : ಸಸ್ಯ ಕಣಜ 

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಕಕ್ಕೆ ಮರ

Golden shower tree ಎಂದೇ ಪ್ರಸಿದ್ಧವಾದ ಈ ಸುಂದರವಾದ ಬಂಗಾರದ ಬಣ್ಣದ ಹೂವುಗಳನ್ನು ಬಿಡುವ ಈ ಮರ ಒಂದೊಮ್ಮೆ ನಮ್ಮ ಬೆಂಗಳೂರಿನ ಹೆಮ್ಮೆಯ ಮರವಾಗಿತ್ತು ( Metro ಬರುವವರೆಗೂ ).
Cassia fistula ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಈ ಮರ Fabaceae ಕುಟುಂಬಕ್ಕೆ ಸೇರಿದ್ದು. ಕನ್ನಡದಲ್ಲಿ ಕಕ್ಕೆ ಮರ / ಕೊಂಡೆ ಮರ ಇತ್ಯಾದಿ ಹೆಸರಿನಿಂದ ಕರೆಯಲ್ಪಡುವ ಈ ಮರ ಪಕ್ಕದ ಕೇರಳಾದ ರಾಜ್ಯ ಪುಷ್ಪ ಹಾಗೂ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಪ.
ಗಟ್ಟಿ ಕಾಂಡದಿಂದಾಗಿ ಮನೆಯ ಪೀಠೋಪಕರಣಗಳಿಗೆ ಉಪಯೋಗಿಸುವುದು ಜಾಸ್ತಿ, ಆದರೆ ಈ ಮರದ ತೊಗಟೆ, ಎಲೆ, ಹೂವು, ಹಣ್ಣು, ಬೀಜ ಎಲ್ಲವೂ ಉಪಯುಕ್ತ.
ಎಲೆಗಳ ಕಷಾಯ ಸೇವನೆ ಪಿತ್ತಕೋಶದ ( Liver ) ಆರೋಗ್ಯಕ್ಕೆ ಒಳ್ಳೆಯದಾದರೆ, ಇದರ ಎಲೆಗಳ ರಸ ಹಚ್ಚುವುದರಿಂದ Eczema, Ring worm, ತುರಿಕೆ ಮುಂತಾದ ಚರ್ಮದ ತೊಂದರೆಗಳ ನಿವಾರಣೆಯಾಗುವುದು.
ಇದು ರಕ್ತ ಶುದ್ಧಿಕಾರಕ, ಉಷ್ಣನಿವಾರಕ ಹಾಗೂ ವಾತಹರ. ಸೇವನೆಯಿಂದ ಮೂತ್ರ ವಿಸರ್ಜನೆ ಸರಾಗವಾಗಿ ಆಗುತ್ತದೆ.
ಅಲ್ಲದೆ 5 ಗ್ರಾಮ್ ಹಣ್ಣಿನ ತಿರುಳನ್ನು, ಬಿಸಿ ಹಾಲಿನ ಜೊತೆ ಊಟವಾದ ನಂತರ ಸೇವಿಸಿದಲ್ಲಿ ಅಜೀರ್ಣ, ಮಲಬದ್ಧತೆ, acidity ನಿವಾರಣೆಯಾಗುವ ಜೊತೆಗೆ ಜಂತು ಹುಳು ( round worm ) ನಿವಾರಣೆಯಾಗುತ್ತೆ.
20 ಗ್ರಾಮ್ ಬಲಿತ ಎಲೆಗಳನ್ನು ಸ್ವಲ್ಪ ಬಾಡಿಸಿ, ಚಮಚ ದಷ್ಟು ಸಾಸುವೆ ಎಣ್ಣೆಯ ಜೊತೆ ಸೇವನೆ Rheumatism ನಿವಾರಣೆಗೆ ಮದ್ದು.
ಪಾದಗಳಲ್ಲಿ ಅತೀಯಾದ uric acid ನಿಂದಾಗಿ ಊತ ವಾಗಿದ್ದಲ್ಲಿ ( Gouts ), ಮರದ ಬೇರನ್ನು ಚೆನ್ನಾಗಿ ತೊಳೆದು, ಬೇಯಿಸಿ ಒಂದು ಲೋಟ ಹಾಲಿನ ಜೊತೆ ದಿನಕ್ಕೆರಡು ಸಲ ಸೇವಿಸಿದಲ್ಲಿ, ರಕ್ತದಲ್ಲಿರುವ Uric acid ನಿಯಂತ್ರಣಕ್ಕೆ ಬರುತ್ತೆ.
ಕೃಪೆ : ಸಸ್ಯ ಕಣಜ

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ನೆಗ್ಗಿಲ ಮುಳ್ಳು

ನೆಗ್ಗಿಲ ಮುಳ್ಳು
ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ ಮತ್ತು ಸಕ್ಕರೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಮೂತ್ರ ಮಾಡುವಾಗ ನೋವಿದ್ದರೆ ನೋವು ನಿವಾರಣೆಯಾಗುತ್ತದೆ.
2. ದೇಹದ ಯಾವುದೇ ಭಾಗದಲ್ಲಿ ನೀರು ತುಂಬಿ ಊತ ಇದ್ದರೆ ನೆಗ್ಗಿಲ ಮುಳ್ಳಿನ ಪುಡಿಯನ್ನು ನೀರಿನ ಜತೆ ಕಷಾಯ ಮಾಡಿ ಕುಡಿದರೆ ಊತ ಕಡಿಮೆಯಾಗುತ್ತದೆ.
3. ಮೇಕೆ ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಿದರೆ ಕಿಡ್ನಿ ಕಲ್ಲು ಕರಗುತ್ತದೆ.
4. ದೇಹದಲ್ಲಿ ಗಾಯವಾಗಿದ್ದರೆ ನೆಗ್ಗಿಲ ಮುಳ್ಳಿನ ಎಲೆಗಳನ್ನು ಪೇಸ್ಟ್‌ ಮಾಡಿ ಕಟ್ಟಿದರೆ, ಗಾಯ ಬೇಗ ಮಾಯುತ್ತದೆ.
5. ನೆಗ್ಗಿಲ ಮುಳ್ಳಿನ ಪುಡಿಗೆ ಶುಂಠಿ ಹಾಕಿ ಕಷಾಯ ಮಾಡಿ ಸೇವಿಸಿದರೆ ಮಂಡಿ ಊತ ಮತ್ತು ನೋವು ನಿವಾರಣೆಯಾಗುತ್ತದೆ..
6. ಕೆಮ್ಮು, ದಮ್ಮು ಹೆಚ್ಚಿದ್ದರೆ, ನೆಗ್ಗಿಲ ಮುಳ್ಳಿನ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ, ಕೆಮ್ಮು ಶಮನವಾಗುತ್ತದೆ.
7. ಒಣ ಕೆಮ್ಮು ಇದ್ದಲ್ಲಿ ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ, ಅಶ್ವಗಂಧ ಪುಡಿ ಮತ್ತು ಹಸುವಿನ ತುಪ್ಪ ಸೇರಿಸಿ ಕುಡಿದರೆ ಕೆಮ್ಮು ಶಮನವಾಗುತ್ತದೆ.
8. ಗರ್ಭಿಣಿಯರಿಗೆ ಮೂತ್ರ ಸರಿಯಾಗಿ ಆಗದಿದ್ದರೆ ನೆಗ್ಗಿಲ ಮುಳ್ಳಿನ ಕಷಾಯಕ್ಕೆ ಹಾಲು ಮತ್ತು ಸಕ್ಕರೆ ಬೆರೆಸಿ ಕುಡಿದರೆ ಈ ಸಮಸ್ಯೆಯಿಂದ ದೂರ ಉಳಿಯಬಹುದು.
ಈ ಮೇಲಿನ ಔಷದಗಳಲ್ಲದೆ ನೆಗ್ಗಿಲ ಮುಳ್ಳಿನ ಪುಡಿ, ಅಮೃತಬಳ್ಳಿ ಪುಡಿ ಮತ್ತು ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಅರ್ಧ ಚಮಚ ತುಪ್ಪ ಹಾಗೂ ಕಾಲು ಚಮಚ ಜೇನುತುಪ್ಪದ ಜತೆ ಕಲಸಿ ಸೇವಿಸವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕೃಪೆ : ಸಸ್ಯ ಕಣಜ

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಪಾರಿಜಾತ

ಪಾರಿಜಾತ
ದೇವಾಸುರರ ‘ಸಮುದ್ರ ಮಂಥನ’ದ ಕಾಲದಲ್ಲಿ ಕ್ಷೀರ ಸಮುದ್ರದಿಂದ ಉದಿಸಿದ ಹದಿನಾಲ್ಕು ರತ್ನಗಳಲ್ಲಿ ಐದು ಕಲ್ಪವೃಕ್ಷಗಳು ಹುಟ್ಟಿದವೆಂದು ಪ್ರತೀತಿ ಇದೆ. ಅವುಗಳೆಂದರೆ ಪಾರಿಜಾತ, ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳಾಗಿವೆ. ಸುರಭಿ ಮತ್ತು ವಾರುಣಿಯ ನಂತರ ಜನಿಸಿದ ಪಾರಿಜಾತವನ್ನು ದೇವತೆಗಳು ದೇವೇಂದ್ರನಿಗೆ ಕೊಟ್ಟರು. ಕೃಷ್ಣಾವತಾರದ ಕಾಲದಲ್ಲಿ ಕೃಷ್ಣನು ದೇವಲೋಕದಿಂದ ಪಾರಿಜಾತ ಗಿಡವನ್ನು ತಂದು ಸತ್ಯಭಾಮೆಯ ಅಂಗಳದಲ್ಲಿ ನೆಡುತ್ತಾನೆ. ಅದರ ಹೂವುಗಳು ರುಕ್ಮಿಣಿಯ ಅಂಗಳಕ್ಕೆ ಬೀಳುತ್ತಿದ್ದು, ಈ ಪ್ರಸಂಗದಲ್ಲಿ ಸತ್ಯಭಾಮೆಯಲ್ಲಿನ ಅಹಂಕಾರ ನಿರ್ಮೂಲವಾಯಿತು ಎನ್ನವುದು ಪುರಾಣದ ಸ್ವಾರಸ್ಯಕರ ಕಥೆ.
ಇನ್ನೊಂದು ಕಥೆಯ ಪ್ರಕಾರ ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನನ್ನು ಪ್ರೀತಿಸುತ್ತಿದ್ದಳು. ಸೂರ್ಯ ಅವಳನ್ನು ತೊರೆದಾಗ ವಿರಹದಿಂದ ಅಗ್ನಿಗೆ ಆತ್ಮಾರ್ಪಣೆ ಮಾಡಿಕೊಂಡ ಪಾರಿಜಾತಕಳ ಬೂದಿಯಿಂದ ಪಾರಿಜಾತ ಗಿಡವು ಹುಟ್ಟಿತು. ಅವಳು ಬತ್ತದ ತನ್ನ ಪ್ರೀತಿಯ ಧಾರೆಯ ಅಮೃತ ಸಿಂಚನವನ್ನು ಬೆಳಗಿನ ಸೂರ್ಯನಿಗೆ ಸಮರ್ಪಿಸುತ್ತಾಳೆ. ಸೂರ್ಯನು ಅಸ್ತಮಿಸಿದ ನಂತರ ಅರಳಿ ಸೂರ್ಯ ಬರುವ ಮೊದಲೇ ಉದುರುವ ಇದು ಸೂರ್ಯನನ್ನು ಇನ್ನೆಂದಿಗೂ ನೋಡ ಲಾರೆನೆಂಬ ಪ್ರತಿಜ್ಞೆಯನ್ನು ಇಂದಿಗೂ ಪಾಲಿಸುತ್ತಿದೆ ಎನ್ನುತ್ತಾರೆ. ಸೂರ್ಯನ ಪ್ರಖರ ಕಿರಣ ತಾಳಲಾರದೇ ಉದುರುವ ಈ ಕೋಮಲ ಹೂವಿನ ನೋವಿನ ಕಥೆಯ ಈ ಮರಕ್ಕೆ ಸೊರಗಿದ ಮರವೆಂತಲೂ ಹೆಸರಿದೆ.
ಪಾರಿಜಾತದಲ್ಲಿ ಸಾಮಾನ್ಯವಾಗಿ ಎರಡು ಬಗೆ ಕಂಡು ಬರುತ್ತದೆ. ಆರು ದಳಗಳು ಬಿಡಿಬಿಡಿ ಇದ್ದು ಹಿಂದಕ್ಕೆ ಮುದುರಿದಂತಿರುವುದು ಒಂದು ಬಗೆಯಾದರೆ, ಇನ್ನೊಂದು ದಳ ಅಗಲವಿದ್ದು ಒಂದಕ್ಕೊಂದು ಸೇರಿದಂತಿರುತ್ತದೆ. ಎಲೆಗಳ ಆಕಾರದಲ್ಲೂ ವ್ಯತ್ಯಾಸವಿದೆ ಸುವಾಸನೆ ಸೂಸುವ ಈ ಸುಂದರ ಹೂವು ಕೆಂಪು ತೊಟ್ಟು, ಬಿಳಿಯ ಮೃದುವಾದ ಎಸಳುಗಳನ್ನು ಹೊಂದಿ ಮುಟ್ಟಿದರೆ ಬಾಡುವುದೇನೋ ಎಂಬಷ್ಟು ಕೋಮಲತೆ ಹೊಂದಿದೆ.
ಬೀಜದಿಂದಲೂ ಸಸ್ಯಾಭಿವೃದ್ಧಿಯಾಗುವ ಇದನ್ನು ಮಳೆಗಾಲದಲ್ಲಿ ಗೆಲ್ಲುಗಳನ್ನು ನೆಟ್ಟು ಸಸ್ಯಾಭಿವೃದ್ಧಿ ಮಾಡಬಹುದು. ಹತ್ತರಿಂದ ಹದಿನೈದು ಅಡಿವರೆಗೆ ಬೆಳೆಯಬಲ್ಲ ಇದು ದೊಡ್ಡ ಗಿಡವಾದಷ್ಟೂ ಹೆಚ್ಚು ಹೂವು ಸುರಿಸುತ್ತದೆ. ನಿಕಾಂಥಿಸ್ ಅರ್ಬಸ್ಟ್ರಿಸ್ಟಿಸ್ ಎಂಬ ಇದರ ವೈಜ್ಞಾನಿಕ ಹೆಸರು, ‘ರಾತ್ರಿ ವೇಳೆ ಹೂವರಳಿಸುವ ದುಃಖತಪ್ತ ಮರ’ ಎಂಬ ಅರ್ಥವನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಶೆಫಾಲಿಕಾ, ಬೆಂಗಾಲಿಯಲ್ಲಿ ಹರ್‌­ಸಿಂಗಾರ್, ಮಲಯಾಳದಲ್ಲಿ ಪವಿಳ ಮಲ್ಲಿಗೆ, ತಮಿಳಿನಲ್ಲಿ ಮಂಜು ಹೂವು ಎನ್ನುವರು.
* ಸುಶ್ರುತ ಸಂಹಿತೆಯಲ್ಲಿ ಇದರ ಔಷಧಿಯ ಗುಣದ ಬಗ್ಗೆ ಹೇಳಲಾಗಿದ್ದು, ತೊಗಟೆಯ ಕಷಾಯದಿಂದ ಗಾಯಗಳನ್ನು ತೊಳೆದರೆ ಪರಿಣಾಮಕಾರಿ, ಎಲೆಯ ರಸ ಜಂತುಹುಳ ನಿವಾರಕ.
* ಪಾರಿಜಾತ ಹಾಗೂ ತುಳಸಿಯ ಎಲೆಯ ಕಷಾಯ ಕೆಮ್ಮು ನೆಗಡಿಗೆ ಉಪಕಾರಿ.
* ಹೂವು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಹಿತವಾದ ಇದರ ಕಂಪು ತೀಕ್ಷ್ಣತೆ ಇಲ್ಲದ ಇದರ ಸುಗಂಧ ತಲೆನೋವನ್ನು ಹೋಗಲಾಡಿಸುತ್ತದೆ. ಹೂವು ಮನೆಯೊಳಗಿದ್ದರೆ ಜೇನಿನಂಥ ಪರಿಮಳದ ಅನುಭವವಾಗುತ್ತದೆ.
* ಹೂವನ್ನು ಅರೆದು ಮುಖಕ್ಕೆ ಪ್ಯಾಕ್ ಹಾಕಿ ಅರ್ಧ ಗಂಟೆಯ ನಂತರ ತೊಳೆದರೆ ಮುಖ ಕೋಮಲ ಹಾಗೂ ಕಾಂತಿಯುತವಾಗುತ್ತದೆ.
* ತಲೆಯಲ್ಲಾಗುವ ಗಾಯಗಳಿಗೆ ಪಾರಿಜಾತದ ಎಲೆ ದಾಸವಾಳದ ಎಲೆಯನ್ನು ಅರೆದು ಪ್ಯಾಕ್ ಹಾಕಿ ಒಂದೆರಡು ಗಂಟೆ ಬಿಟ್ಟು ತೊಳೆಯಬೇಕು.
* ಹಿಂದೆ ಪಾರಿಜಾತದ ಕೆಂಪು ತೊಟ್ಟಿನಿಂದ ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು.
ಪಾರಿಜಾತದ ಹೂವು ದೇವರ ಪೂಜೆಗೆ ಬಹಳ ಶ್ರೇಷ್ಠವಾದ ಹೂವು. ಸಾಮಾನ್ಯವಾಗಿ ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು ಬಕುಳದ ಹೂವಿಗೆ ಇದರಿಂದ ರಿಯಾಯಿತಿ ಇದೆ .

ಕೃಪೆ : ಸಸ್ಯ ಕಣಜ

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಬಜೆ

ಬಜೆ
ಇದೊಂದು ಏಕದಳ ಸಸ್ಯ. ಕರ್ನಾಟಕದ ಅನೇಕ ಭಾಗಗಳಲ್ಲಿ ಇದನ್ನು ಸಾಗುವಳಿ ಮಾಡಲಾಗುತ್ತದೆ. ಬಜೆಗಿಡದಲ್ಲಿ ನೆಲದೊಳಗಿರುವ ಸುವಾಸನೆಯಿಂದ ಕೂಡಿದ ಶಿಘಾವೃಂತ ಅಥವಾ ಕಂದು ಇರುತ್ತದೆ. ಈ ಕಂದು ಸಾಮಾನ್ಯವಾಗಿ ೧-೨ ಮೀ. ಉದ್ದವಿರುತ್ತದೆ. ಕಂದಿನ ಮೇಲಿನ ಎಲೆಗಳು ೦.೭೫ – ೧.೫ಮೀ. ಉದ್ದ ಹಾಗೂ ೨ – ೪ಸೆಂ. ಮೀ. ಅಗಲವಿದ್ದು ಐರಿಸ್ ಗಿಡದ ಎಲೆಯನ್ನು ಹೋಲುತ್ತದೆ. ಹೂತನೆಯು ೬-೩೦ಸೆಂ. ಮೀ. ಉದ್ದವಿರುತ್ತದೆ. ಹಣ್ಣು ಹಳದಿ ಹಸಿರು ಬಣ್ಣವಿದ್ದು ೧-೩ ಬೀಜಗಳಿರುತ್ತವೆ. ಈ ಗಿಡದ ವಾಣಿಜ್ಯ ಭಾಗ ಗುಪ್ತಕಾಂಡ. ಇದು ೧.೫-೨.೫ಸೆಂ. ಮೀ. ದಪ್ಪವಾಗಿರುತ್ತದೆ.
ಔಷಧೀಯ ಗುಣಗಳು
ಬಜೆಯನ್ನು ಸುಟ್ಟು ಭಸ್ಮವನ್ನು ಮಾಡಿ, ಅರ್ಧ ಚಮಚ ಭಸ್ಮಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿವಸಕ್ಕೆ ೨-೩ ವೇಳೆ ತಿನ್ನುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ.
ಬಜೆಯನ್ನು ತೇಯ್ದು ತುಪ್ಪದೊಡನೆ ಕಲಸಿ ಮಕ್ಕಳಿಗೆ ತಿನ್ನಿಸುವುದರಿಂದ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣ ೧೦ಗ್ರಾಂನಷ್ಟನ್ನು ದಿವಸಕ್ಕೊಮ್ಮೆ ಬೆಳಗ್ಗೆ ಬಿಸಿ ನೀರಿನಲ್ಲಿ ಅಥವಾ ಜೇನಿನಲ್ಲಾಗಲೀ ಇಟ್ಟು ೪೦ ದಿನ ಸೇವಿಸಿದರೆ ಮೂರ್ಛೆ ಗುಣವಾಗುತ್ತದೆ.
ಬಜೆಯನ್ನು ಅರೆದು ಲೇಪಿಸುವುದರಿಂದ, ಸಂಧಿವಾತ ಮತ್ತು ಲಕ್ವ ಗುಣವಾಗುತ್ತದೆ.
ಹಸಿ ಬಜೆಯ ರಸವನ್ನು ಕಿವಿಗೆ ಹಿಂಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.
ಬಜೆ, ನಾಗಕೇಸರಿ, ಹಿಪ್ಪಲಿ ಬೇರಿನ ಚೂರ್ಣಗಳನ್ನು ಸೇರಿಸಿ ಸೇವಿಸಿದರೆ ಸುಖ ಪ್ರಸವವಾಗುತ್ತದೆ.
ಬಜೆ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ.
ಬಜೆಯ ಕಷಾಯ ಸೇವನೆಯಿಂದ ಮೂತ್ರಕೋಶದ ಕಲ್ಲು ಕರಗಿ ಹೋಗುತ್ತದೆ. ಮೂತ್ರ ಬಂಧವೂ ನಿವಾರಣೆಯಾಗುತ್ತದೆ.
ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ.
ಬಜೆ ಮತ್ತು ಸೈಂಧಲವಣ ಇವೆರಡನ್ನು ನೀರಿನೊಡನೆ ಕುಡಿಯುವುದರಿಂದ ಕಫ ವಾಂತಿಯಾಗಿ ಕೆಮ್ಮು ಶಮನವಾಗುತ್ತದೆ.
ಬಜೆಯ ಗಂಧ ತಯಾರಿಸಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು ಮತ್ತು ಮೂಲವ್ಯಾಧಿ ಗುಣವಾಗುತ್ತದೆ.
ಒಂದು ತಿಂಗಳಿಂದ ಆರು ತಿಂಗಳ ಮಕ್ಕಳಲ್ಲಿ ಭೇದಿಯಾಗುತ್ತಿದ್ದಲ್ಲಿ ಹಾಗೂ ಹೊಟ್ಟೆ ಉಬ್ಬರವಿದ್ದಲ್ಲಿ ಬಜೆಪುಡಿಯನ್ನು ಹರಳೆಣ್ಣೆಯಲ್ಲಿ ಬೆರೆಸಿ ಹೊಟ್ಟೆಯ ಮೇಲೆ ಲೇಪಿಸಬೇಕು .
ಕೃಪೆ : ಸಸ್ಯ ಕಣಜ

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...