Sunday, October 21, 2018

ಗೋಣಿಸೊಪ್ಪು / ಕಿರುಗೋಣಿಸೊಪ್ಪು


ಗೋಣಿಸೊಪ್ಪು / ಕಿರುಗೋಣಿಸೊಪ್ಪು ಎಂದು ಕರೆಯಲ್ಪಡುವ ಈ ಸಸ್ಯ ಬೆಳೆಯದಿರುವ ಜಾಗವೇ ಇಲ್ಲ. ಶೇಕಡ 65 % ನೀರನ್ನು ಹಿಡಿದಿಟ್ಟು ಕೊಳ್ಳುವ ಹಾಗೂ ಒಮ್ಮೆಲೇ ಸುಮಾರು 3 ಲಕ್ಷ ಬೀಜ ಪ್ರಸರಣ ಸಾಮರ್ಥ್ಯ ಇರುವ ಸಸ್ಯ ಎಂತಹಾ ಬರದಲ್ಲೂ ಬದುಕುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಸೇವಿಸುವವರ ಬದುಕನ್ನೂ ಹಸನು ಮಾಡುವ ಗುಣಗಳಿವೆ.
Purslane ಎಂದು ವಿಶ್ವದಾದ್ಯಂತ ಸಾಮಾನ್ಯವಾಗಿ ಕರೆಯಲ್ಪಡುವ Portulacaceae ಕುಟುಂಬದ ಇದರ ಸಸ್ಯ ಶಾಸ್ತ್ರೀಯ ಹೆಸರು Portulaca oleracea. ಮುಲತಃ ಉತ್ತರ ಅಮೆರಿಕಾದ ಸಸ್ಯ.
ಗೋಣಿಸೊಪ್ಪು ಅತ್ಯಾದಿಕವಾದ ವಿಟಮಿನ್ ಹಾಗೂ ಖನಿಜಗಳನ್ನ ಹೊಂದಿದೆ :- Vitamin - A, B, C, E, B -9, B -6, Riboflavin, Niacin, Magnesium, Manganese, Iron, Calcium...ಇತ್ಯಾದಿ, ಇತ್ಯಾದಿ..
ಇದರಲ್ಲಿ Antimutagens - Betalin ಹಾಗೂ Alkaloid pigments ಇರುವುದರಿಂದ, ಗೋಣಿಸೊಪ್ಪು ಕ್ಯಾನ್ಸರ್ ನಿವಾರಕ.
Omega - 3 fatty acid ಮೀನಿಗಿಂತ ಹೆಚ್ಚಿನಂಶ ಇರುವುದರಿಂದ Autism ಹಾಗೂ ಕಡಿಮೆ ಬುದ್ಧಿಶಕ್ತಿ ಇರುವ ಮಕ್ಕಳಿಗೆ ಇದರ ಸೇವನೆ ಅತ್ಯವಶ್ಯ. ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಮೆದುಳು ಸಂಬಂದಿ ತೊಂದರೆಗಳು ನಿವಾರಣೆಗೆ ಸಹಕಾರಿ.
ಅಧಿಕ ನಾರಿನಂಶ ಇರುವುದರಿಂದ ಮಲಬದ್ಧತೆ ನಿವಾರಣೆಯಾಗುವುದಲ್ಲದೆ, ಮೂಲವ್ಯಾದಿ, ಫಿಸ್ತುಳ ಹಾಗೂ ಇತರ ಜಠರದ ತೊಂದರೆಗಳ ನಿವಾರಕ.
65 mg Calcium, 68 mg Magnesium ಜೊತೆಗೆ ದಾರಾಳವಾಗಿ ಕಬ್ಬಿಣ ಮತ್ತು Manganese ಇರುವುದರಿಂದ Osteoporosis ನಿವಾರಣೆಗೆ ಸಹಕಾರಿ. ಅಲ್ಲದೆ ದೇಹದ ಇತರ ಮೂಳಗಳು ಶಕ್ತಿಯುತವಾಗುತ್ತವೆ. 45 ದಾಟಿದ ಹೆಣ್ಣುಮಕ್ಕಳು ( Menopause stage ) ಅವಶ್ಯವಾಗಿ, ನಿಯಮಿತವಾಗಿ ಗೋಣಿಸೊಪ್ಪು ಸೇವಿಸಬೇಕು.
ಗೋನಿಸೊಪ್ಪಿನಲ್ಲಿ antioxidents ಅಧಿಕವಾಗಿ ಇರುವುದರಿಂದ ಇದರ ಸೇವನೆಯಿಂದ ದೇಹದ ಪ್ರತಿಯೊಂದು ಕಣ ಕಣ ಗಳಿಗೂ ರಕ್ತ ಪರಿಚಲನೆ ಹಾಗೂ ಆಮ್ಲಜನಕ ಪೂರೈಕೆ ಸರಾಗವಾಗಿ ಆಗುತ್ತದೆ ಹಾಗೆ ಕೆಂಪು ರಕ್ತ ಕಣಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತದೆ.

ಕೃಪೆ : ಸಸ್ಯ ಕಣಜ 

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...