ಶತಾವರಿ
ಶತಾವರಿ ಸಸ್ಯಕ್ಕೆ ನೂರು ಮಕ್ಕಳ ತಾಯಿ ಎಂದು ಕರೆಯುತ್ತಾರೆ. ಇದಕ್ಕೆ ಸಂಸ್ಕರತದಲ್ಲಿ ಶತಮೂಲಿ ಎಂಬ ಹೆಸರಿದೆ. ಇಂಗ್ಲಿಶ್‍ನಲ್ಲಿ ಅಸ್ಪರಾಗಸ್ ಎಂದು ಕರೆಯಲಾಗುತ್ತದೆ. ಆಸ್ಪರಾಗಸ್ ಇದು ಗ್ರೀಕ್ ಪದವಾಗಿದ್ದು, ಇದರರ್ಥ ಕಾಂಡ, ಚಿಗುರು ಎಂದು. ಹಾಗೆನೇ ಇದೊಂದು ಕವಲು ಬೇರುಳ್ಳ ಸಸ್ಯ.
ಪ್ರಸವದ ನಂತರ ಎದೆಹಾಲು ಕಮ್ಮಿ ಇರುವ ತಾಯಂದಿರು ಸೇವಿಸಿದರೆ ಹಾಲು ಸಮೃದ್ಧಿಯಾಗಿ ಉತ್ಪತ್ತಿ ಆಗುತ್ತದೆ. ಅಜೀರ್ಣ, ಸುಟ್ಟಗಾಯ, ಮೂತ್ರರೋಗ, ನರಸಂಬಂಧ ವ್ಯಾಧಿ ಮುಂತಾದ ತೊಂದರೆಗಳಿಗೆ ಬಳಸಬಹುದು.
ಶತಾವರಿಯ ಔಷಧೀಯ ಗುಣಗಳು
ಶತಾವರಿ ಬೇರನ್ನು ಎಣ್ಣೆಯಲ್ಲಿ ಕುದಿಸಿ, ಆ ಎಣ್ಣೆಯನ್ನು ಚರ್ಮರೋಗಗಳಿಗೆ ಉಪಯೋಗಿಸುತ್ತಾರೆ. ಶತಾವರಿಯ ತಾಜಾ ಬೇರಿನ 25 ಮಿಲಿಲೀಟರ್ ರಸವನ್ನು ಅರ್ಧ ಚಮಚ ಜೇನಿನೊಂದಿಗೆ ಸೇವಿಸಿದರೆ, ಊತ ನಿವಾರಣೆ ಆಗುತ್ತದೆ.ಶತಾವರಿ ಬೇರಿನ ರಸ, ಎಳ್ಳೆಣ್ಣೆ, ಅರಿಶಿಣದ ಕಷಾಯ, ಒಡೆದ ಹಾಲಿನ ತಿಳಿಭಾಗ ಮತ್ತು ಹಾಲನ್ನು ಸೇರಿಸಿ, ಎಣ್ಣೆ ಮಾತ್ರ ಉಳಿಯುವಂತೆ ಕುದಿಸಬೇಕು. ಕುದಿದ ಉಳಿದ ಭಾಗವನ್ನು ಜೀರ್ಣ ಸಂಬಂಧ ಸಮಸ್ಯೆಗಳಲ್ಲಿ ಮತ್ತು ಅನ್ಯ ಮೂತ್ರ ರೋಗಗಳಿಗೆ ಉಪಯೋಗಿಸುತ್ತಾರೆ.ಶತಾವರಿ ಎಲೆಯನ್ನು ಬೇಯಿಸಿ, ಆ ಎಲೆಗಳ ಮೇಲೆ ತುಪ್ಪ ಸವರಿ ತಯಾರಿಸಿ ಸವರಿ ಸುಟ್ಟ ಗಾಯಗಳಿಗೆ , ಘೋರ ಅಮ್ಮಬಂದಾಗ ಲೇಪಿಸಿದರೆ, ಉತ್ತಮ ಫಲಿತಾಂಶವನ್ನು ಪಡೆಯಬಹುದು.ಶತಾವರಿ ಬೇರಿನ ರಸವನ್ನು ಹಾಲು ಸಕ್ಕರೆಯೊಂದಿಗೆ ಪೇಯ ತಯಾರಿಸಿ ಸೇವಿಸಿದರೆ, ಆರೋಗ್ಯ ವರ್ಧನೆಯಾಗುತ್ತದೆ.ಶತಾವರಿ ಬೇರಿನ ರಸಕ್ಕೆ ಸಮಪ್ರಮಾಣದಲ್ಲಿ ಎಳ್ಳಣ್ಣೆ ಬೆರೆಸಿ, ಹಸುವಿನ ಅಥವಾ ಮೇಕೆ ಹಾಲನ್ನು ಸೇರಿಸಿ ಎಣ್ಣೆ ಉಳಿಯುವವರೆಗೆ ಕಾಯಿಸಬೇಕು, ನಂತರ ಅದನ್ನು ನರಗಳ ಮೇಲೆ ಲೇಪಿಸಿದರೆ ನರಗಳಿಗೆ ಸಂಬಂಧವಾದ ವ್ಯಾಧಿ ದೂರ ಆಗುತ್ತದೆ.ಎರಡು ಚಮಚ ಶತಾವರಿ ಚೂರ್ಣವನ್ನು ಒಂದು ಲೋಟ ನೀರು ಮತ್ತು ಒಂದು ಲೋಟ ಹಾಲಿಗೆ ಸೇರಿಸಿ, ಹಾಲು ಮಾತ್ರ ಉಳಿಯುವಂತೆ ಕುದಿಸ ಬೇಕು. ಅದಕ್ಕೆ ಕಲ್ಲು ಸಕ್ಕರೆ, ಏಲಕ್ಕಿಪುಡಿ ಬೆರೆಸಿ ಸೇವಿಸಿದರೆ ಬಲ, ಕಾಂತಿ ವೃದ್ಧಿಯಾಗಿ, ಆರೋಗ್ಯ ವೃದ್ದಿಸುತ್ತದೆ. ಹಾಲು ಕುಡಿಸುವ ತಾಯಂದಿರಿಗೆ ಉತ್ತಮ ಪೇಯವಾಗುತ್ತದೆ.ಶತಾವರಿ ಚೂರ್ಣ, ಜೇಷ್ಟಮಧು ಚೂರ್ಣ, ಅಶ್ವಗಂಧ ಚೂರ್ಣಗಳನ್ನು ಸಮಪ್ರಮಾಣದಲ್ಲಿ ಬೆರೆಸಿಟ್ಟು ಪ್ರತಿದಿನ ಒಂದು ಚಮಚವನ್ನು ಜೇನಿನಲ್ಲಿ ಕಲೆಸಿ ತಿಂದ ಮೇಲೆ, ಹಾಲನ್ನು ಕುಡಿಯುತ್ತಾ ಬಂದರೆ ವೀರ್ಯಾಣುಗಳು ವೃದ್ಧಿಯಾಗುತ್ತವೆ. ದೀರ್ಘವ್ಯಾಧಿಯಿಂದ ಚೇತರಿಸಿಕೊಳ್ಳುವವರಿಗೆ ಒಂದು ಉತ್ತಮ ಔಷಧಿ.
ಶತಾವರಿ ಬೇರಿನಿಂದ ಯಾರಿಸಿದ ಶತಾವರ್ಯಾದಿ ಲೇಹ್ಯ ಸ್ತ್ರೀಯರಿಗೆ ಎಲ್ಲಾ ವಿಧವಾದ ತೊಂದರೆಗಳಿಗೆ ಒಂದು ಶ್ರೇಷ್ಠ ಔಷಧಿ.ಶತಾವರಿ ಗಡ್ಡೆ ಪುಡಿ ಅತೀಸಾರ ಭೇದಿಯಿಂದ ನರಳುತ್ತಿರುವವರಿಗೆ ಫಲಕಾರಿ.
ಎಳ್ಳೆಣ್ಣೆಯಲ್ಲಿ ಶತಾವರಿ ಗಡ್ಡೆ ಹಾಕಿ, ನೋವಿರುವ ಸ್ಥಳಕ್ಕೆ ಹಂಚಿಕೊಂಡರೆ ನೋವು ಕಡಿಮೆಯಾಗುತ್ತದೆ.ಅಡುಗೆಯಲ್ಲಿ ಶತಾವರಿಯನ್ನು ಪಲ್ಯದ ರೂಪದಲ್ಲಿ ಬಳಸುವುದರಿಂದ ಹೃದ್ರೋಗ ಪರಿಹಾರವಾಗುತ್ತದೆ.ಶತವರಿಯನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ ಮೂತ್ರ ಸುಲಭವಾಗುತ್ತದೆ.
ಶತಾವರಿ ಬೇರಿನಿಂದ ಯಾರಿಸಿದ ಶತಾವರ್ಯಾದಿ ಲೇಹ್ಯ ಸ್ತ್ರೀಯರಿಗೆ ಎಲ್ಲಾ ವಿಧವಾದ ತೊಂದರೆಗಳಿಗೆ ಒಂದು ಶ್ರೇಷ್ಠ ಔಷಧಿ.ಶತಾವರಿ ಗಡ್ಡೆ ಪುಡಿ ಅತೀಸಾರ ಭೇದಿಯಿಂದ ನರಳುತ್ತಿರುವವರಿಗೆ ಫಲಕಾರಿ.
ಎಳ್ಳೆಣ್ಣೆಯಲ್ಲಿ ಶತಾವರಿ ಗಡ್ಡೆ ಹಾಕಿ, ನೋವಿರುವ ಸ್ಥಳಕ್ಕೆ ಹಂಚಿಕೊಂಡರೆ ನೋವು ಕಡಿಮೆಯಾಗುತ್ತದೆ.ಅಡುಗೆಯಲ್ಲಿ ಶತಾವರಿಯನ್ನು ಪಲ್ಯದ ರೂಪದಲ್ಲಿ ಬಳಸುವುದರಿಂದ ಹೃದ್ರೋಗ ಪರಿಹಾರವಾಗುತ್ತದೆ.ಶತವರಿಯನ್ನು ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ ಮೂತ್ರ ಸುಲಭವಾಗುತ್ತದೆ.
ನೂರು ಗ್ರಾಂ ಶತಾವರಿಯಲ್ಲಿರುವ ಪೋಷಕಾಂಶಗಳು
ತೇವಾಂಶ – 93.0 ಗ್ರಾಂ
ಸಸಾರಜನಕ – 2.2 ಗ್ರಾಂ
ಕೊಬ್ಬು – 0.2 ಗ್ರಾಂ
ಶರ್ಕರ ಪಿಷ್ಟ – 3.2 ಗ್ರಾಂ
ನಾರಿನಾಂಶ – 0.7 ಗ್ರಾಂ
ಕಬ್ಬಿಣ – 0.960 ಗ್ರಾಂ
ರಂಜಕ – 0.039 ಗ್ರಾಂ
ಸುಣ್ಣ – 0.025 ಗ್ರಾಂ
ಎ ಜೀವಸತ್ವ – 1400 ಇಂ. ಯೂ
ಬಿ1 ಜೀವಸತ್ವ – 0.180ಗ್ರಾಂ .
ಬಿ2 ಜೀವಸತ್ವ – 0.130 ಗ್ರಾಂ
ಸಿ ಜೀವಸತ್ವ – 0.040 ಗ್ರಾಂ
ಶತಾವರಿಯಿಂದ ತಯಾರಿಸ ಬಹುದಾದ ಅಡುಗೆಗಳು
ಶತಾವರಿ ಸೂಪ್,ಶತಾವರಿ ಪಲ್ಯ ,ಶತಾವರಿ ಉಪ್ಪಿನಕಾಯಿ ,ಶತಾವರಿ ಸಾಂಬಾರ್ ,ಶತಾವರಿ ಚಟ್ನಿ
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.
No comments:
Post a Comment