ಅರ್ಕ,' ಎಂದರೆ, ಪೂಜನೀಯವೆಂದರ್ಥ. 'ತೈತ್ತರೀಯ ಸಂಹಿತೆ,' ಯಲ್ಲಿ ಅರ್ಕ, ಉಷ್ಣ ಮತ್ತು ತೀಕ್ಶ್ಣ ಗುಣಗಳನ್ನು ಹೊಂದಿದೆಯೆಂದು ಹೇಳಲಾಗಿದೆ. 'ಅಥರ್ವ ಶೌನಕೇಯ ಸಂಹಿತೆ,' ಯಲ್ಲಿ 'ಅರ್ಕಮಣಿ' 'ವಾಜೀಕರಣ,' (ಸಂತಾನ ಸಾಮರ್ಥ್ಯ ಸಂವರ್ಧನೆ) ದಂತೆ ಕಾರ್ಯ ನಿರ್ವಹಿಸುತ್ತದಯೆಂದು ತಿಳಿಸಲಾಗಿದೆ.
ಎಕ್ಕದ ಯಾವುದೇ ಭಾಗವನ್ನಾಗಲಿ ಔಷಧರೂಪದಲ್ಲಿ ಸೇವನೆಗೆ ನೀಡಬೇಕಾದಲ್ಲಿ, ಆ ಭಾಗವನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ೭ ಸಾರಿ ಹಸುವಿನ-ಹಾಲಿನಲ್ಲಿ ಭಾವನೆ ಕೊಟ್ಟು ಅನಂತರ ೭ ಬಾರಿ ಎಣ್ಣೆ-ಹಾಲಿನಲ್ಲಿ ಭಾವನೆಕೊಟ್ಟು ಉಪಯೋಗಿಸಬೇಕು.ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ-ರಸದಲ್ಲಿ ಅರೆದು ಸೇವಿಸಿದರೆ ಉಪಶಮನವಾಗುತ್ತದೆ.ಚೇಳುಕಡಿದಲ್ಲಿ ಎಕ್ಕದ ಬೇರನ್ನು ತಣ್ಣೀರಿನಲ್ಲಿ ಅರೆದು ಕುಡಿಯಬೇಕು.ಕಫದಿಂದ ಕೂಡಿದ ಕೆಮ್ಮಿದ್ದರೆ,ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ೫ ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.ಅಂಗಾಲಿನಲ್ಲಿ ಮುಳ್ಳು ಸೇರಿಕೊಂಡಿದ್ದರೆ, ಮುಳ್ಳನ್ನು ನಿಧಾನವಾಗಿ ತೆಗೆದು ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾಧೆ ನಿವಾರಣೆಯಾಗುತ್ತದೆ.'ಮೂಲವ್ಯಾಧಿ,' ಯಿಂದ ಬಳಲುವವರಿಗೆ ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೊಳಕೆಗಳಿಗೆ ಲೇಪಿಸುವುದರಿಂದ ಬೇಗ ಗುಣವಾಗುತ್ತದೆ.ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಬಹುದು. 'ಹಲ್ಲುನೋವಿಗೆ,' ಇದು ಬಹಳ ಒಳ್ಳೆಯದು.'ಮೂತ್ರಕಟ್ಟಿದ್ದಲ್ಲಿ,' ಎಕ್ಕದ ಎಲೆಗಳನ್ನು ಒಣಗಿಸಿ ನಯವಾಗಿ ಪುಡಿಮಾಡಿಟ್ಟುಕೊಂಡು ೧೦ ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರಸಿ ಕುಡಿಸುವುದರಿಂದ 'ಮೂತ್ರವಿಸರ್ಜನೆ,' ಸುಗಮವಾಗುತ್ತದೆ.ಮೇಲಿಂದ-ಮೇಲೆ 'ಅಜೀರ್ಣ,' ದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ,ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು.'ಗಾಯ,' ಗಳಿಗೆ ಮತ್ತು 'ವೃಣ,' ಗಳಿಗೆ ಒಣಗಿಸಿದ ಎಲೆಯನ್ನು ಪುಡಿಮಾಡಿಟ್ಟುಕೊಂಡು ಸಿಂಪಡಿಸಬೇಕು.ಮಹಿಳೆಯರಿಗೆ 'ಮುಟ್ಟಿನ ಪ್ರಕ್ರಿಯೆ ಅನಿಯಮಿತವಾಗಿದ್ದಲ್ಲಿ,'ಎಕ್ಕದ ಹೂವು, ಬೆಲ್ಲ ಸೇರಿಸಿ,ಅರೆದು ಗುಳಿಗೆಮಾಡಿಕೊಂಡು, ದಿನಕ್ಕೆ ೩-೪ ಮಾತ್ರೆಯಂತೆ ಸೇವಿಸುವುದು ಉತ್ತಮ.'ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು',ಎಕ್ಕದ ಹೂವನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ ೧೫ ದಿನಗಳ ವರೆಗೆ ಸೇವಿಸತಕ್ಕದ್ದು.ಅಜೀರ್ಣವಿದ್ದರೆ, ಎಕ್ಕದ ೧೦ ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು.ಕ್ರಿಮಿಕೀಟಗಳು, ಕಜ್ಜಿ,ಊತ, ಉರಿ ಬಾಧಿಸುತ್ತಿದ್ದರೆ, ಎಕ್ಕದ ಹಾಲನ್ನು ಅದರಮೇಲೆ ಲೇಪಿಸಿದರೆ, ಉಪಶಮನ ದೊರೆಯುತ್ತದೆ
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.
No comments:
Post a Comment