Sunday, October 21, 2018

ಚಳ್ಳೆಹಣ್ಣು


ಚಳ್ಳೆಹಣ್ಣು (ಇಂಗ್ಲೀಷ್ Bird lime) ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು.
ಏಷ್ಯಾ ಮೂಲದ ಚಳ್ಳೆಗಿಡ ೮-೧೦ ಮೀ ಎತ್ತರಕ್ಕೆ ಬೆಳೆಯಬಲ್ಲದು. ತೆಳ್ಳನೆಯ ಇಳಿ ಬಿದ್ದ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು. ಚಿಕ್ಕ ಬಿಳಿ ಹೂಗೂಂಚಲು ಹಸಿರು ಕಾಯಿಗಳಿಗೆ ರೂಪಾಂತರ. ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಿನಲ್ಲಿ ಸುತ್ತುವರೆದ ಪಾರದರ್ಶಕ ಸಿಹಿ ಅಂಟಿನ ತಿರುಳು
ಹೌದು ಸಾಮಾನ್ಯವಾಗಿ ಹಳ್ಳಿಯಲ್ಲಿ ಸಿಗುವ ಈ ಚಳ್ಳೆ ಹಣ್ಣು ತುಂಬ ಜನ ಗೇಲಿ ಮಾಡುವುದು ಉಂಟು ಚಳ್ಳೆಹಣ್ಣು ತಿನ್ನಿಸ್ತೀನಿ ನೋಡು ಅನ್ನೋದು ವಾಡಿಕೆಯಾಗಿದೆ. ಆದ್ರೆ ಈ ಹಣ್ಣಿನಲ್ಲಿರುವ ಲಾಭಗಳು ಹಲವು ಯಾವ ಯಾವ ಲಾಭಗಳು ಅಂತೀರಾ ಇಲ್ಲಿವೆ ನೋಡಿ.
ಪೌಷ್ಟಿಕಾಂಶಗಳು: ಪ್ರೋಟೀನ್, ಶರ್ಕರಪಿಷ್ಟ, ಕಬ್ಬಿಣ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣ. ಹಣ್ಣಿನಿಂದ ಮದ್ಯ, ಕಾಯಿಗಳಿಂದ ಉಪ್ಪಿನಕಾಯಿ, ಸಾಂಬಾರ್.
ಔಷಧೀಯ ಗುಣ: ಹಣ್ಣು ವಿರೇಚಕ, ಮೂತ್ರವರ್ಧಕ, ಶಾಮಕ ಮತ್ತು ಕೆಮ್ಮು ನಿವಾರಕ. ಚರ್ಮ ರೋಗ ಮತ್ತು ತುರಿಕೆ ನಿವಾರಣೆಗೆ, ತಲೆಗೂದಲು ಬೆಳೆಯಲು ಉತ್ತಮ.ಗರ್ಭಕೋಶದ ಹಾಗೂ ಯಕೃತ್ ತೊಂದರೆಗೆ ಹಣ್ಣಿನ ಔಷಧಿ. ಚಳ್ಳೆ ಬೀಜದ ಪುಡಿಯಿಂದ ಹುಳಕಡ್ಡಿಯ ಶಮನ. ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖ. ಗಾಯಕ್ಕೆ ತೊಗಟೆಯ ಗಂಧ ಲೇಪನ.
ಇದರ ವಿಶಿಷ್ಟತೆ: ಹಣ್ಣಿನ ಅರೆಪಾರದರ್ಶಕ ತಿರುಳು ಉತ್ತಮ ಅಂಟು. ಸೊಪ್ಪು ಪಶುಗಳಿಗೆ ಮೇವು. ದೋಣಿ, ಆಟಿಗೆ, ಕೃಷಿ ಉಪಕರಣಗಳು ಮತ್ತು ಕೆತ್ತನೆ ಕಲಸಕ್ಕೆ ಮರದ ಬಳಕೆ, ಕನ್ನಡ ಸಾಹಿತ್ಯದಲ್ಲಿ ಚಳ್ಳೆ ಹಣ್ಣು ತಿನ್ನಿಸು ಎಂಬ ನುಡಿಗಟ್ಟಿನ ಪ್ರಯೋಗ ಸಾಮಾನ್ಯ.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...