ಕಾಮಕಸ್ತೂರಿ
ಇದು ತುಳಸಿಯ ಜಾತಿಗೆ ಸೇರಿದ ಸುವಾಸನೆಯುಳ್ಳ ಗಿಡವಾಗಿದೆ.ದೇಹದ ಉಷ್ಣತೆಯನ್ನು ಹೀರುವ ಗುಣವಿರುವ ಕಾರಣಕ್ಕೆ ಇದರ ಬೀಜವನ್ನು ನೆನೆಹಾಕಿ ಉಪವಾಸ ಮಾಡುವ ಸಮಯದಲ್ಲಿ ಸೇವಿಸುತ್ತಾರೆ.ಯಾಕೆಂದರೆ ಉಪವಾಸ ಇರುವಾಗ ಉಂಟಾಗುವ ಅಸಿಡಿಟಿ ಮತ್ತು ಮಲಬಧ್ಧತೆಯನ್ನು ಇದು ಹೋಗಲಾಡಿಸುತ್ತದೆ.ಇದನ್ನು ನೀರಿನಲ್ಲಿ ನೆನೆಸಿದಾಗ ಲೋಳೆಯಂತೆ ಉಬ್ಬಿಕೊಳ್ಳುವುದು.ಹೀಗೆ ನೆನೆಸಿದ ಬೀಜವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುವುದು, ಅಜೀರ್ಣ ವಾಸಿಯಾಗುವುದು.ಕೆಮ್ಮು ಶೀತವನ್ನು ಹೋಗಲಾಡಿಸುವುದು.ದೇಹದಲ್ಲಿ ಬೇಡವಾದ ಅಶುದ್ದವನ್ನು ಹೊರಹಾಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು,ನೆನೆದ ಬೀಜಗಳನ್ನು ಹಾಲಿನಜೊತೆ ಕಲ್ಲುಸಕ್ಕರೆ ಬೆರೆಸಿ ಸೇವಿಸುವುದರಿಂದ ಪಿತ್ತಶಮನವಾಗುವುದು.ಹಲ್ಲಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕ್ಯಾನ್ಸರ್ ಕಣಗಳ ವಿರುದ್ದ ಹೋರಾಡುವ ಶಕ್ತಿಯೂ ಇದಕ್ಕಿದೆ.ಇದರ ಸೇವನೆಯಿಂದ ಮನಸ್ಸಿಗೆ ಹಿತ ಹಾಗೂ ಶಾಂತವಾದ ಪರಿಣಾಮ ಬೀರುವುದರಿಂದ ಮಾನಸಿಕ ವ್ಯಾದಿಗಳಲ್ಲಿ ಇದು ಉಪಯೋಗವಾಗುತ್ತದೆ.ನೆನೆದ ಬೀಜ ಜ್ಯೂಸ್ ಸಲಾಡ್ಸ್ ಗೆ ವಿಶೇಷ ರುಚಿ ಕೊಡುವುದು. ದೇಹದ ದುರ್ಗಂಧಕ್ಕೆ ಇದರ ಎಲೆಗಳ ರಸ ಹಚ್ಚಿದರೆ ಕ್ರಮೇಣ ದುರ್ಗಂಧ ದೂರವಾಗುವುದು.
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.
No comments:
Post a Comment