Sunday, October 21, 2018

ಕೊಳವಳಿಕೆ ಗಿಡ


ಕೊಳವಳಿಕೆ ಗಿಡವು ಅಲ್ಪ ನೀರಿರುವ ಕಡೆ ಮತ್ತು ನೀರಿನಂಚಿನಲ್ಲಿ ಬೆಳೆಯುತ್ತದೆ.ಇದರಲ್ಲಿ ಕೆಂಪು ಕೊಳವಳಿಕೆ,ಬಿಳೀ ಕೊಳವಳಿಕೆ,ಸೀಮೆ ಕೊಳವಳಿಕೆ ಎನ್ನುವ ಭೇದಗಳಿವೆ.ಇದರ ಎಲೆಗಳು ತರಕಲಾಗಿ ಉದ್ದವಾಗಿರುತ್ತದೆ.ಹಾಗೂ ಇದರ ದಂಟಿನುದ್ದಕ್ಕೆ ಸಮ ಅಳತೆಯಲ್ಲಿ ಚೂಪಾದ ಮುಳ್ಳುಗಳ ಗುಂಪಿರುತ್ತದೆ.ಈ ಗಂಟುಗಳಲ್ಲಿಯೇ ಹೂ ಬಿಡುವುದು.ಇದರ ಹೂಗಳು ಚಿಕ್ಕದಾಗಿರುವುವು ಮತ್ತು ಬಿಳೀ ಅಥವಾ ಕೆಂಪು ವರ್ಣದ್ದಾಗಿರುವುವು.ಈ ಗಿಡದ ಕಾಂಡದ ಗಿಣ್ಣಿನಲ್ಲಿ ಎಲೆಗಳು ಮೂಡಿರುವುವು.ಇದರಲ್ಲಿ ಆರು ಎಲೆಗಳಿರುವುವು ಮತ್ತು ಮುಂದೆ ಸಾಗಿ ಮಧ್ಯ ಭಾಗದಲ್ಲಿ ವಾಲಿರುವುವು.ಇದರಲ್ಲಿ ಹೂಗಳು ಸಂಯೋಗ ವರ್ಗದಲ್ಲಿ ೬ ರಿಂದ ೮ ಇರುವುವು.ಇದರ ಕಾಯಿಗಳಲ್ಲಿ ಚಿಕ್ಕ ಚಿಕ್ಕ ಬೀಜಗಳಿರುವುವು.ಇದರ ಎಲೆ ರುಚಿಯಾಗಿರುವುದು ಹಾಗೂ ಇದರ ಬೇರು ಮಧುರ.ಇದರ ಉಪಯೊಗ ಎಂದರೆ ಇದರ ಬೀಜವು ಶರೀರಕ್ಕೆ ಬಲವನ್ನು ಕೊಡುತ್ತದೆ ಹಾಗೂ ದಾಹ ಮತ್ತು ಪಿತ್ತವನ್ನು ಶಮನಗೊಳಿಸುವುದು.
ಸರಳ ಚಿಕಿತ್ಸೆಗಳು .
ಆಮಶಂಕೆಯ ನಿವಾರಣೆಗೆ .
೨ಗ್ರಾಂ ಕೊಳವಳಿಕೆ ಬೀಜದ ಚೂರ್ಣವನ್ನು ಮಜ್ಜಿಗೆಯಲ್ಲಿ ಸೇರಿಸಿ ನುಣ್ಣಗೆ ಅರೆದು ಮತ್ತಷ್ಟು ಮಜ್ಜಿಗೆ ಸೇರಿಸಿ ದಿವಸಕ್ಕೆ ಎರಡು ವೇಳೆ ಕುಡಿಸುವುದು.ಹೀಗೆ ೫ ರಿಂದ ೭ ದಿವಸ ಸೇವನೆ ಮಾಡುವುದು.
ಜ್ವರ ಮತ್ತು ವಾಂತಿಯ ಶಮನಕ್ಕೆ .
ಬಿಳೀ ಕೊಳವಳಿಕೆ ಗಿಡದ ಬೇರನ್ನು ತಂದು ಆಡಿನ ಹಾಲಿನಲ್ಲಿ ನುಣ್ಣಗೆ ಅರೆದು ಸೇವಿಸುವುದು.ವೇಳೆಗೆ ೧/೪ ಟೀ ಚಮಚ.
ಶ್ವಾಸ, ಕಾಸ, ಬಿಕ್ಕಳಿಕೆಯ ನಿವಾರಣೆಗೆ .
ಬಿಳೀ ಕೊಳವಳಿಕೆ ಗಿಡದ ಬೇರನ್ನು ತಂದು ಆಡಿನ ಹಾಲಿನಲ್ಲಿ ನುಣ್ಣಗೆ ರುಬ್ಬುವುದು.ಅನಂತರ ಬಟ್ಟೆಯಲ್ಲಿ ಶೋಧಿಸಿ,ಆಡಿನ ಹಾಲಿನಲ್ಲಿ ಕದಡಿ ವೇಳೆಗೆ ಅರ್ಧ ಟೀ ಚಮಚ ಸೇವಿಸುವುದು.೭ ರಿಂದ ೧೫ ದಿವಸ.
ರಕ್ತ ಪಿತ್ತದ ನಿವಾರಣೆಗೆ .
ಕೊಳವಳಿಕೆ ಗಿಡದ ಸಮೂಲವನ್ನು ತಂದು ಚೆನ್ನಾಗಿ ತೊಳೆದು ಶುದ್ಧಿಪಡಿಸುವುದು.೫ ಗ್ರಾಂ ಸೊಪ್ಪನ್ನು ನೀರಿನಲ್ಲಿ ಹಾಕಿ ಬೇಯಿಸಿ ನೀರು ಸಮೇತ ತಿನ್ನುವುದು.
ಶೋಭೆ, ಮೂತ್ರ ಕೃಚ್ಛ, ಜ್ವರಗಳ ನಿವಾರಣೆಗೆ .
ಕೊಳವಳಿಕೆ ಸೊಪ್ಪನ್ನು ಚೆನ್ನಾಗಿ ತೊಳೆದು ಶುದ್ಧಿ ಮಾಡುವುದು.ಸೊಪ್ಪಿನ ರಸವನ್ನು ಸ್ವಲ್ಪ ಜೇನು ಮತ್ತು ನೀರು ಸೇರಿಸಿ ಕುಡಿಸುವುದು.ಒಂದು ವೇಳೆಗೆ ೫ ಗ್ರಾಂ ದಿವಸಕ್ಕೆ ಎರಡು ಬಾರಿ.
ಇಂದ್ರಿಯ ಸ್ಖಲನ, ಸ್ವಪ್ನಧಾತು ನಷ್ಟ ಹತೋಟಿಗೆ .
೫೦ ಗ್ರಾಂ ಕೊಳವಳಿಕೆ ಬೀಜವನ್ನು ಆಲದ ಹಾಲಿನಲ್ಲಿ ನೆನಸಿ ಒಣಗಿಸುವುದು.ಈ ರೀತಿ ಮೂರು ಬಾರಿ ಮಾಡುವುದು.ಅನಂತರ ಈ ಬೀಜಗಳನ್ನು ಚೆನ್ನಾಗಿ ಒಣಗಿಸಿ ನುಣ್ಣಗೆ ಚೂರ್ಣಿಸಿ ಕೆಂಪು ಕಲ್ಲು ಸಕ್ಕರೆ ಪುಡಿಯನ್ನು ಸೇರಿಸುವುದು.ಪ್ರತಿ ದಿವಸ ಒಂದೇ ವೇಳೆ ೨ ಗ್ರಾಂ ಚೂರ್ಣವನ್ನು ಹಾಲಿನೊಂದಿಗೆ ಸೇವಿಸುವುದು.
ಶೋಭೆಗೆ ವಿರುದ್ಧ ಬಳಕೆ .
ಬಿಳಿತೊಂಡೆ ಸೊಪ್ಪು, ಕೊಳವಳಿಕೆ ಸೊಪ್ಪು ಮತ್ತು ಹತ್ತಿ ಕಾಂಡ ಸುಟ್ಟ ಬೂದಿ.ನೀರಿನಲ್ಲಿ ಕದಡಿ ಮಂದವಾಗಿ ಸರಿಯಂತೆ ಮಾಡಿ.ಇಡೀ ದೇಹಕ್ಕೆ ಲೇಪಿಸುವುದು.
ಚಳಿ ಜ್ವರಗಳ ನಿವಾರಣೆಗೆ .
೨ ಗ್ರಾಂ ಶುಂಠಿ, ೬ ಮೆಣಸಿನ ಕಾಳು ಮತ್ತು ೨೦ ಗ್ರಾಂ ಕೊಳವಳಿಕೆ ಸೊಪ್ಪು ತಂದು ಚೆನ್ನಾಗಿ ನುಣ್ಣಗೆ ಅರೆದು ಕಡಲೆಗಾತ್ರದ ಮಾತ್ರೆ ಮಾಡಿ ನೆರಳಿನಲ್ಲಿ ಒಣಗಿಸುವುದು.ಚಳಿ, ಜ್ವರ ಸಾಮಾನ್ಯವಾಗಿ ಬರುವ ಒಂದು ತಾಸು ಮುಂಚೆ ಕಾದಾರಿದ ಬಿಸಿನೀರಿನೊಂದಿಗೆ ಒಂದೊಂದು ಮಾತ್ರೆಯನ್ನು ಸೇವಿಸುವುದು.(ಕೊಳವಳಿಕೆ ಬೀಜಗಳು ಗ್ರಂಧಿಗೆ ಅಂಗಡಿಯಲ್ಲಿ ದೊರೆಯುತ್ತವೆ.)

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...