Sunday, October 21, 2018

ಬುದ್ದೆ / ಬಡ್ಡೆ / ದೊಡ್ಡ ಬಡ್ಡೆ ಹಣ್ಣು



ಬುದ್ದೆ / ಬಡ್ಡೆ / ದೊಡ್ಡ ಬಡ್ಡೆ ಹಣ್ಣು
ನೋಡಲು ದೀಪಾವಳಿ ಹಬ್ಬದ ಆಕಾಶಬುಟ್ಟಿಯಂತೆ ಅಥವಾ ಲಾಟೀನುಗಳಂತೆ ಕಾಣುವ ಹಣ್ಣುಗಳನ್ನು ಬಿಡುವ ಈ ಸಸ್ಯ Physalis alkenkengi. Solanaceae ಕುಟುಂಬದ ಇದರ ಸಾಮಾನ್ಯ ಹೆಸರೇ Chinese Lantern plant. ಬಹುಶಃ ಕನ್ನಡದಲ್ಲಿ " ಬುದ್ದೆ / ಬಡ್ಡೆ / ದೊಡ್ಡ ಬಡ್ಡೆ ಹಣ್ಣು " ಎಂದು ಕರೆಯುತ್ತಾರೆ. Cape Gooseberry ಎಂದೂ ಹೆಸರಿದೆ.
ಹುಳಿ ಮಿಶ್ರಿತ ಸಿಹಿ ಹಣ್ಣುಗಳು ನಮ್ಮ ಟೊಮ್ಯಾಟೋ ಹಣ್ಣುಗಳ ರುಚಿಯಂತೆಯೇ ಇರುತ್ತವೆ. ಅಧಿಕವಾದ ವಿಟಮಿನ್ - A ಮತ್ತು C ಇದೆ.
ಕಾಯಿಗಳಲ್ಲಿ Solanine ಎಂಬ ಅಂಶ ಇರುವುದರಿಂದ, ಕಾಯಿಗಳ ಸೇವನೆ ಸ್ವಲ್ಪ ವಿಷಕಾರಿ. ಆದರೆ ಹಣ್ಣುಗಳನ್ನು ಧಾರಾಳವಾಗಿ ಉಪಯೋಗಿಸಬಹುದು. ಮೂಲ ಬ್ರೆಝಿಲ್ ದೇಶದ ಈ ಹಣ್ಣುಗಳಿಂದ ಆ ದೇಶದಲ್ಲಿ Jam ತಯಾರಿಸುತ್ತಾರೆ.
ವಿಷಮ ಶೀತ ಜ್ವರ, ಮಲೇರಿಯಾ, ಗಂಟುಗಳ ಊತ, ಒಣ ಕೆಮ್ಮು, ದಮ್ಮು ಮುಂತಾದ ತೊಂದರೆಗಳಿಗೆ ಹಣ್ಣುಗಳು ಪ್ರಯೋಜನಕಾರಿ. ಕೇರಳ ರಾಜ್ಯದಲ್ಲಿ ಈ ಗಿಡದ ಎಲೆಗಳ ರಸವನ್ನು ಕಾಮಾಲೆ ( Jaundice ) ನಿವಾರಣೆಗಾಗಿ ಕುಡಿಸುವುದನ್ನು ನೋಡಿದ್ದೇನೆ.
ಚೀನಾ ಮತ್ತು ಜಪಾನ್ ದೇಶದಲ್ಲಿ ಹೆರಿಗೆ ನಿದಾನವಾದಲ್ಲಿ ಈ ಗಿಡದಿಂದ ತಯಾರಿಸಿದ ಒಂದು ಕಷಾಯವನ್ನು ಅಲ್ಲಿಯ ನಾಟಿ ಅಜ್ಜಿಯರು ಕುಡಿಸುತ್ತಾರೆ. ಇದರಿಂದ ಹೆರಿಗೆ ಸುಸೂತ್ರವಾಗಿ ಆಗಿರುವುದನ್ನು ಸಹಾ ಕಂಡಿದ್ದೇನೆ.
ರಕ್ತಹೀನತೆಗೆ ( anemic ) ಒಳ್ಳೆಯದು.

ಕೃಪೆ: ಸಸ್ಯ ಕಣಜ 

ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...