ನೀರು ಮತ್ತಿ, ಹೊಳೆ ಮತ್ತಿ
ಅರ್ಜುನ ( Terminalia arjuna, Combreteaceae ಕುಟುಂಬ ). ಕನ್ನಡದಲ್ಲಿ ನೀರು ಮತ್ತಿ, ಹೊಳೆ ಮತ್ತಿ ಇತ್ಯಾದಿ ಹೆಸರುಗಳ ಇವೆ. ಸಾಮಾನ್ಯವಾಗಿ ಸುಮಾರು 30 ಕ್ಕೂ ಹೆಚ್ಚು ಎತ್ತರ ಬೆಳೆಯುವ ಬಹುವಾರ್ಷಿಕ ಮರ. ತಾಂಜವೂರಿನ ಕಾವೇರಿ ನದಿ ತೀರದಲ್ಲಿ ಸುಮಾರು 70 ಅಡಿಗೂ ಎತ್ತರದ 600 ವರ್ಷ ಹಳೆಯ ಮರವನ್ನು ಕಳೆದವರ್ಷ ನೋಡಿದ್ದೆ.
ಸುಮಾರು 3,000 ವರ್ಷಗಳ ಹಿಂದೆಯೇ ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿರುವ ಈ ಸಸ್ಯಕ್ಕೆ, 7 ನೇ ಶತಮಾನದಲ್ಲಿ ಇದ್ದ ಆಯುರ್ವೇದ ತಜ್ಞ ಹಾಗೂ ಮುನಿ ವಘಭಟ ( ವಾಗ ಭಟ್ಟ ) ಮಾನವನ ಎಲ್ಲಾ ತೊಂದರೆಗಳಿಗೆ ಏಕೈಕ ದಿವ್ಯ ಔಷದ ಈ ಅರ್ಜುನ ಎಂದು ಹೇಳಿದ್ದಾನೆ.
ಹೃದಯ ಸಂಬಂಧಿತ ಎಲ್ಲಾ ತೊಂದರೆಗಳಿಗೂ ರಾಮಬಾಣ ಅರ್ಜುನ. ಅರ್ಜುನದ ತೊಗಟೆಯ ಕಷಾಯ ಸೇವನೆಯಿಂದ, ಹೃದಯಕ್ಕೆ ರಕ್ತ ಪೂರೈಕೆ ಮಾಡುವ ರಕ್ತನಾಳಗಳು ಬಿಗಿಯಾಗದೆ ರಕ್ತ ಸಂಚಾರ ಸುಲಭವಾಗಿ ಹೃದಯ ಸ್ಥಂಭನ - Heart attack ಹಾಗೂ ಪಾರ್ಶುವಾಯು ಆಗುವುದನ್ನು ತಡೆಯಬಹುದು. ನಮ್ಮ ಹೃದಯವನ್ನು ಹಿಡಿದಿಟ್ಟುಕೊಂಡಿರುವ muscles ಗಳ ಚಲನೆಯನ್ನು ಸಮನಾಗಿ ಇರಿಸಿಕೊಳ್ಳುವ ಮೂಲಕ, ನಮ್ಮ ಹೃದಯದ ಬಡಿತ ಸಾಮಾನ್ಯ ಸ್ಥಿತಿಯಲ್ಲಿ ಸದಾಕಾಲ ಇರುವಂತೆ ಅರ್ಜುನ ನೋಡಿಕೊಳ್ಳುತ್ತದೆ.
ಅಷ್ಟೇ ಅಲ್ಲದೆ ಹಳೆಯ ಗಾಯಗಳು ಒಣಗಲು ( ವಿಶೇಷವಾಗಿ ಸಕ್ಕರೆ ಖಾಯಿಲೆ ಇರುವವರಿಗೆ ) ರಕ್ತ ಬೀಳುತ್ತಿರುವ ಮೂಲವ್ಯಾದಿ ಗುಣ ಪಡಿಸಲು, ಅಲ್ಲದೆ ಪಿತ್ತಕೋಶದ ತೊಂದರೆಗಳಿಗೆ ( ಕಾಮಾಲೆ - jaundice, ಮದ್ಯಪಾನ ದಿಂದ ಆಗಿರುವ Liver Cirrhosis ) ಗುಣಪಡಿಸುವುದು.
ಅರ್ಜುನದ ತೊಗಟೆಯ ಚೂರ್ಣವನ್ನು ರಕ್ತ ಚಂದನದ ಜೊತೆ ತೇಯ್ದು, ಸಕ್ಕರೆ ಹಾಗೂ ಅಕ್ಕಿ ತೊಳೆದ ನೀರಿನ ಜೊತೆ ಸೇವಿಸುವುದರಿಂದ ಕ್ಷಯರೋಗ ವಾಸಿಯಾಗುವುದಂತೆ.
ಅಲ್ಲದೆ ಯಾವುದೇ ಚರ್ಮ ಸಂಬಂಧಿ ತೊಂದರೆಗಳು, ರಕ್ತ ಭೇದಿ, ಆಮಶಂಕೆ ಅರ್ಜುನದಿಂದ ಗುಣವಾಗುವುದು.
ಅರ್ಜುನದ ಕ್ಷೀರ ಪಾಕ ಮಾಡುವ ವಿಧಾನ :- 1 : 8 : 32 ಪ್ರಮಾಣದಲ್ಲಿ, ಅರ್ಜುನದ ತೊಗಟೆಯ ಚೂರ್ಣ, ಹಸುವಿನ ಹಾಲು ಹಾಗೂ ನೀರು ತೆಗೆದುಕೊಂಡು ( 10 gm ಚೂರ್ಣ, 80 ml ಹಾಲು, 320 ml ನೀರು ) ಸಣ್ಣ ಉರಿಯಲ್ಲಿ ಕಾಯಿಸಿ 5 ನೇ 1 ಭಾಗಕ್ಕೆ ಇಳಿಸಬೇಕು ( 80 ಗ್ರಾಮ್ ನಷ್ಟು ) .
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.
No comments:
Post a Comment