Sunday, October 21, 2018

ತುಂಬೆ


ತುಂಬೆ 
Latin : LEUCES ASPERA ,Telugu : Tummi (ತುಮ್ಮಿ,Malayaalam Tumba , kamala –Tumbi,Sanskrit -Drona pushpi
Hindi - ಗಮ ಮಧು ಪಟ್ಟಿ
ಇದು ಸಾಮಾನ್ಯ ಔಷಧ ಗಿಡವಾಗಿ ಎಲ್ಲರಿಗೂ ತಿಳಿದಿದೆ .ಇದು ಅನೇಕ ಆಕಸ್ಮಿಕಗಳಲ್ಲಿ ಬಹಳ ಉಪಕಾರಿ . ಇದು ೧-೨ ಅಡಿಎತ್ತರಕ್ಕೆ ಬೆಳೆಯುತ್ತದೆ. ಅಲ್ಲಲ್ಲಿ ಗಂಟುಗಳು ಇರುತ್ತವೆ.ಅಲ್ಲದೆ ಎಲೆಗಳು ೨" ಉದ್ದವಾಗಿರುತ್ತವೆ, ೧/೪ ಇಂಚು ಅಗಲವಿರುತ್ತದೆಇಲಿಗಳ ಕಿವಿಗಳಂತೆ ಇದರ ಹೂವುಗಳು ಕೆಳಗಡೆ ಇರುತ್ತದೆ.ಹೂ ಬಿಳುಪಾಗಿರುತ್ತದೆ , ಒಂದೇ ದಳ ಇರುತ್ತದೆ . .
ಗಿಡದ ಉಪಯೋಗ :
ಇದರ ಎಲೆಗಳನ್ನು ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತವೆ .ಇವುಗಲ್ಲನ್ನು ಅನೇಕಸಲ ರೀಚಕವಾಗಿ ಮತ್ತು ಅನೇಕಸಲ ವಾಂತಿ ಮಾಡಿಸಲಿಕ್ಕಾಗಿ ವಿಷಾಹಾರ ಸೇವಿಸಿದಾಗ ಉಪಯೋಗಿಸುತ್ತಾರೆ.ಕಸವನ್ನು ಹೊರಗೆ ಹಾಕುತ್ತದೆ.ಸಾಮಾ ನ್ಯವಾಗಿ ದೇಹದ ತಾಪಮಾನವನ್ನು ಕಾಪಾಡುತ್ತದೆ .ದೃಷ್ಟಿಯನ್ನು ವೃದ್ಧಿಸುತ್ತದೆ. ಹೆಂಗಸರಿಗೆ ಆಗುವ ರಕ್ತ ಸ್ರಾವವನ್ನು ಕಡಿಮೆ ಮಾಡುತ್ತದೆ .
ಎಲೆಗಳು ಎಲ್ಲಾ ವಿಷಕಾರಿ ಸಣ್ಣ ಕ್ರಿಮಿಗಳನ್ನು ನಾಶ ಮಾಡುತ್ತದೆ .
ಹಾವು ಕಚ್ಚಿದಾಗ ಇದರ ಉಪಯೋಗದಿಂದ ಗುಣ ಪಡೆಯಬಹುದು .
ಉಪಯೋಗಿಸುವ ವಿಧಾನ :
ಹಾವು ಕಚ್ಚಿದ ತಕ್ಷಣ ೩/೪ ರಿಂದ 1 OZ .ಇದರ ಎಲೆಗಳ ರಸವನ್ನು ಬಾಯಿ ಮೂಲಕ ಕೊಡಬೇಕು.ತಕ್ಷಣ ೨-೩ ಸಲ ಭೇದಿಯಾಗಿ ಮತ್ತು ವಾಂತಿಯಾಗಿ ಹೊಟ್ಟೆಯೊಳಗಿನ ವಿಷವನ್ನು ಹೊರ ಹಾಕುತ್ತದೆ . ಆಗ ನಿಧಾನವಾಗಿ ದೇಹದ ತಾಪಮಾನ ಮರಳಿ ಮಾಮೂಲು ಸ್ಥಿತಿಗೆ ಬರುತ್ತದೆ .
ಹಾವು ಕಚ್ಚಿದ ೩೦ ತಾಸುಗಳ ವರೆಗೆ ಹಾವು ಕಚ್ಚಿದವರು ಎಚ್ಚರದಿಂದ ಇರಬೇಕು .೨ ದಿವಸ ಹೆಸರು ಬೇಳೆ ಅಣ್ಣ ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ್ದನ್ನು ಕೊಡಬೇಕು.ಉಪ್ಪು , ಮೆಣಸಿನಕಾಯಿ , ಹುಳಿ,ಮೆಣಸಿನಖಾರ, ಹುಳಿ ಇತಾದಿಗಳನ್ನು ೩ನೆ ದಿನದಿಂದ ತೆಗೆದುಕೊಳ್ಳಬಹುದು .
೧.ಒಂದು ಪಕ್ಷ ರೋಗಿ ಎಚ್ಚರ ತಪ್ಪಿ (ಪ್ರಜ್ಞಾಶೂನ್ಯ ) ಬಿದ್ದರೆ , ಬಾಯಿಯಲ್ಲಿ ಬುರುಗು ಇತ್ಯಾದಿ ಬಂದರೆ ಕೆಲವು ಹನಿ ದ್ರೋಣ ಪುಷ್ಪಿ (ತುಂಬಿ) ಎಲೆಯ ರಸವನ್ನು ಮೂಗಿನ ಹೊಲ್ಲೆಯಲ್ಲಿ ಹಾಕಬೇಕು .ನಂತರ ಸ್ವಲ್ಪ ಸಮಯದಲ್ಲೇ ಪ್ರಜ್ಞೆ ಬರುತ್ತದೆ .ನಂತರ 1oz (ಒಂದು ಔನ್ಸೆ) ರಸವನ್ನು ಬಯೋ ಮೂಲಕ ಕೊಡಿರಿ .ಅದರ ಎಲೆಗಳನ್ನು ಅರೆದು ಹಾವು ಕಚ್ಚಿದ ಜಾಗದಲ್ಲಿ ಹಚ್ಚಿರಿ (ಕಟ್ಟಿರಿ) .
೨.ಇದೆ ತರಹ ಚೇಳು ಕಚ್ಚಿದಾಗ ಅಥವಾ ಇನ್ನಾವುದೇ ಹುಳಗಳು ಕಚ್ಚಿದರೆ ಜೇನು ತುಪ್ಪದ ಜೊತೆ ಬಾಯಿ ಮೂಲಕ ಕೊಡಿರಿ ಮತ್ತು ಎಲೆಗಳನ್ನು ಅರೆದು ಕಚ್ಚಿದ ಜಾಗದಲ್ಲಿ ಹಚ್ಚಿರಿ.ಇದರಿಂದ ಕೂಡಲೇ ಗುಣ ಕಾಣಿಸುತ್ತದೆ .
೩.ಕಾಮಾಲೆ ರೋಗದಲ್ಲಿ (Jaundice) , ಎಚ್ಚರ ತಪ್ಪಿದಾಗ ಬಿಳಿ ಚಿಬ್ಬ್ಬಿನಲ್ಲಿ (White spots) , ತಲೆ ಸುತ್ತಿನಲ್ಲಿ ನೆಗಡಿಯಿಂದ ಮೂಗಿನಿಂದ ನೀರು ಇಳಿಯುತ್ತಿದರೆ , ತುಂಬಿ ರಸ (ಎಲೆಯಿಂದ) ಮೂಗಿಗೆ ಹಾಕಿದರೆ ಗುಣವಾಗುತ್ತದೆ.
೪. ತುಂಬಿ ಎಲೆ ಮತ್ತು ಉತ್ತರಾಣಿ ಎಲೆ (Dacmic extracts) ಎಲೆ ಸೇರಿಸಿ ಚೆನ್ನಾಗಿ ಅರೆದು . ಹಾಲಿನ (ಆಕಳ ಹಾಲಿನ) ಜೊತೆ ಬೆಳಗ್ಗೆ -ಸಾಯಂಕಾಲ ಹೆಣ್ಣು ಮಕ್ಕಳಿಗೆ ಮಾಸಿಕ ತೊಂದರೆ ಗಳಲ್ಲಿ (Irregulalr periods) ಹೆಚ್ಚು ರಕ್ತ ಸ್ರಾವವಗುತ್ತಿದರೆ ಇದರ ಸೇವನೆಯಿಂದ ತುಂಬಾ ಗುಣಕಾರಿಯಾಗುತ್ತದೆ.ಆದರೆ ಹುಳಿ , ಖಾರ ಇತ್ಯಾದಿಗಳನ್ನು ಬಿಡಬೇಕು
ಹೂಗಳ ಉಪಯೋಗ :
ತುಂಬಿ ಹೂಗಳ ರಸ ೪ ಹನಿಗಳು ಉತ್ತರಾಣಿ ಎಲೆಗಳ ರಸ ೨ ಹನಿ ಮತ್ತು ಮೆಣಸು ಪುಡಿ ೨ ಚಿಟಗಿ , ಜೇನು ತುಪ್ಪದ ಜೊತೆಗೆ ಮಕ್ಕಳಿಗೆ ಕೊಟ್ಟರೆ ಹೊಟ್ಟೆಯ ತೊಂದರೆಗಳು ಕಡಿಮೆಯಾಗುತ್ತದೆ .

ಕೃಪೆ : ಸಸ್ಯ ಕಣಜ 


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...