Sunday, October 21, 2018

ಕಕ್ಕೆ ಮರ


Golden shower tree ಎಂದೇ ಪ್ರಸಿದ್ಧವಾದ ಈ ಸುಂದರವಾದ ಬಂಗಾರದ ಬಣ್ಣದ ಹೂವುಗಳನ್ನು ಬಿಡುವ ಈ ಮರ ಒಂದೊಮ್ಮೆ ನಮ್ಮ ಬೆಂಗಳೂರಿನ ಹೆಮ್ಮೆಯ ಮರವಾಗಿತ್ತು ( Metro ಬರುವವರೆಗೂ ).
Cassia fistula ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಈ ಮರ Fabaceae ಕುಟುಂಬಕ್ಕೆ ಸೇರಿದ್ದು. ಕನ್ನಡದಲ್ಲಿ ಕಕ್ಕೆ ಮರ / ಕೊಂಡೆ ಮರ ಇತ್ಯಾದಿ ಹೆಸರಿನಿಂದ ಕರೆಯಲ್ಪಡುವ ಈ ಮರ ಪಕ್ಕದ ಕೇರಳಾದ ರಾಜ್ಯ ಪುಷ್ಪ ಹಾಗೂ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಪ.
ಗಟ್ಟಿ ಕಾಂಡದಿಂದಾಗಿ ಮನೆಯ ಪೀಠೋಪಕರಣಗಳಿಗೆ ಉಪಯೋಗಿಸುವುದು ಜಾಸ್ತಿ, ಆದರೆ ಈ ಮರದ ತೊಗಟೆ, ಎಲೆ, ಹೂವು, ಹಣ್ಣು, ಬೀಜ ಎಲ್ಲವೂ ಉಪಯುಕ್ತ.
ಎಲೆಗಳ ಕಷಾಯ ಸೇವನೆ ಪಿತ್ತಕೋಶದ ( Liver ) ಆರೋಗ್ಯಕ್ಕೆ ಒಳ್ಳೆಯದಾದರೆ, ಇದರ ಎಲೆಗಳ ರಸ ಹಚ್ಚುವುದರಿಂದ Eczema, Ring worm, ತುರಿಕೆ ಮುಂತಾದ ಚರ್ಮದ ತೊಂದರೆಗಳ ನಿವಾರಣೆಯಾಗುವುದು.
ಇದು ರಕ್ತ ಶುದ್ಧಿಕಾರಕ, ಉಷ್ಣನಿವಾರಕ ಹಾಗೂ ವಾತಹರ. ಸೇವನೆಯಿಂದ ಮೂತ್ರ ವಿಸರ್ಜನೆ ಸರಾಗವಾಗಿ ಆಗುತ್ತದೆ.
ಅಲ್ಲದೆ 5 ಗ್ರಾಮ್ ಹಣ್ಣಿನ ತಿರುಳನ್ನು, ಬಿಸಿ ಹಾಲಿನ ಜೊತೆ ಊಟವಾದ ನಂತರ ಸೇವಿಸಿದಲ್ಲಿ ಅಜೀರ್ಣ, ಮಲಬದ್ಧತೆ, acidity ನಿವಾರಣೆಯಾಗುವ ಜೊತೆಗೆ ಜಂತು ಹುಳು ( round worm ) ನಿವಾರಣೆಯಾಗುತ್ತೆ.
20 ಗ್ರಾಮ್ ಬಲಿತ ಎಲೆಗಳನ್ನು ಸ್ವಲ್ಪ ಬಾಡಿಸಿ, ಚಮಚ ದಷ್ಟು ಸಾಸುವೆ ಎಣ್ಣೆಯ ಜೊತೆ ಸೇವನೆ Rheumatism ನಿವಾರಣೆಗೆ ಮದ್ದು.
ಪಾದಗಳಲ್ಲಿ ಅತೀಯಾದ uric acid ನಿಂದಾಗಿ ಊತ ವಾಗಿದ್ದಲ್ಲಿ ( Gouts ), ಮರದ ಬೇರನ್ನು ಚೆನ್ನಾಗಿ ತೊಳೆದು, ಬೇಯಿಸಿ ಒಂದು ಲೋಟ ಹಾಲಿನ ಜೊತೆ ದಿನಕ್ಕೆರಡು ಸಲ ಸೇವಿಸಿದಲ್ಲಿ, ರಕ್ತದಲ್ಲಿರುವ Uric acid ನಿಯಂತ್ರಣಕ್ಕೆ ಬರುತ್ತೆ.
ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...